ಬೆಂಗಳೂರು, ಅ.06 (DaijiworldNews/AA): ಕರ್ನಾಟಕದ ಬಿಜೆಪಿ ನಾಯಕರು ಫಾರ್ಮ್ 7 ಮೂಲಕ ಕುತಂತ್ರ ರಾಜಕೀಯ ಮಾಡಬಾರದು ಎಂದು ಸಿಎಂ ಡಿ.ಕೆ.ಶಿವಕುಮಾರ್ ಎನ್ಡಿಎ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಎನ್ಡಿಎ ನಾಯಕರಿಂದ ರಾಜ್ಯಪಾಲರಿಗೆ ದೂರು ವಿಚಾರಕ್ಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, "ಕರ್ನಾಟಕದ ಬಿಜೆಪಿ ನಾಯಕರು ಇಂತಹ ಕುತಂತ್ರ ರಾಜಕಾರಣ ಮಾಡಬಾರದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲೆಕ್ಷನ್ ಗೆಲ್ಲಬೇಕು. ಚುನಾವಣೆ ಆಯೋಗ ಇಟ್ಟುಕೊಂಡು ವೋಟ್ ಶಫಲ್ ಮಾಡೋದು, ಬೇರೆ ಬೇರೆ ಬೂತ್ಗೆ ವೋಟ್ ಹಾಕಿಸೋದು, ದಲಿತರು, ಅಲ್ಪಸಂಖ್ಯಾತರು, ಬಡವರ ವೋಟ್ ಕಿತ್ತು ಹಾಕೋದು ಈ ಕೆಲಸ ಮಾಡ್ತಾ ಇದ್ದಾರೆ. ಇದು ನಾಚಿಕೆಗೇಡಿನ ವಿಚಾರ" ಎಂದು ಆಕ್ರೋಶ ವ್ಯಕ್ತಪಡಿಸಿದರು.
"ಈಗ ಬಿಜೆಪಿ ಕಾರ್ಯಕರ್ತರನ್ನ ರಕ್ಷಣೆ ಮಾಡೋಕೆ ಹೋಗಿದ್ದಾರೆ. ಬಿಜೆಪಿ ಕಾರ್ಯಕರ್ತರು ಅಮಾಯಕರು. ಗಂಡ, ಹೆಂಡತಿ, ಮಗ ಮೂರು ಜನ ಡಿಲೀಟ್ಗೆ ಕೊಟ್ಟಿದ್ದಾರೆ. ಮಾಧ್ಯಮಗಳೇ ಚೆಕ್ ಮಾಡಿವೆ. ಪಾಪ ಕಾರ್ಯಕರ್ತರು ಪೊಲೀಸ್ ಸ್ಟೇಷನ್ಗೆ ಹೋಗಿದ್ದಾರೆ. ರವಿ ಪಾಟೀಲ್ ಒಪ್ಪಿಕೊಂಡಿದ್ದಾರೆ. ಬಬಲೇಶ್ವರ, ಶೃಂಗೇರಿ, ಬಳ್ಳಾರಿ, ಜಯನಗರ ಸೇರಿ ಅನೇಕ ಕಡೆ ಹೀಗೆ ಆಗಿದೆ ಅಂತ ಒಪ್ಪಿಕೊಂಡಿದ್ದಾರೆ. ವಿಜಯೇಂದ್ರ ಅಶೋಕ್ ಅವರೇ 25,000 ಕೊಟ್ಟಿರಬಹುದು ಅಂತಾರೆ. ಆನೆ ಕದ್ದು ಕಳ್ಳ, ಅಡಿಕೆ ಕದ್ದರು ಕಳ್ಳ. ಈ ರೀತಿ ಮಾಡೋದು ಸರಿಯಲ್ಲ" ಎಂದು ಕಿಡಿಕಾರಿದರು.
"ನಾನು ನಮ್ಮ ಜನರಿಗೆ ಜಾಗೃತಿ ಮೂಡಿಸೋ ಕೆಲಸ ಮಾಡ್ತಾ ಇದ್ದೇವೆ. ಒಬ್ಬ ಸಿಎಂ ಆಗಿ, ಪ್ರಜಾ ಪ್ರತಿನಿಧಿ ಆಗಿ ಜನರಿಗೆ ಮತ ಕೊಡಿಸೋ ಜವಾಬ್ದಾರಿ ನಮ್ಮದು ಮಾಡ್ತೀವಿ. ಅಧಿಕಾರ ದುರುಪಯೋಗ ಅಂತ ಆದ್ರು ಅವರು ತಿಳಿದುಕೊಳ್ಳಲಿ. ಏನಾದ್ರು ಹೇಳಿಕೊಳ್ಳಲಿ" ಎಂದು ಹರಿಹಾಯ್ದರು.