ಚೆನ್ನೈ, ಅ.04 (DaijiworldNews/AA): ತಮಿಳುನಾಡಿನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಅಧಿಕೃತವಾಗಿ ಇಂಡಿ ಮೈತ್ರಿಕೂಟ ಸೇರಿಕೊಂಡಿದೆ.

ಚೆನ್ನೈನಲ್ಲಿರುವ ಕಾಂಗ್ರೆಸ್ನ ಸತ್ಯಮೂರ್ತಿ ಭವನದಲ್ಲಿ ನಡೆದ ಇಂಡಿ ಮೈತ್ರಿಕೂಟದ ಈ ಸಭೆಯಲ್ಲಿ, ಟಿವಿಕೆಯ ಇಬ್ಬರು ಸಚಿವರು ಭಾಗವಹಿಸುವ ಮೂಲಕ ಮೈತ್ರಿಕೂಟದೊಂದಿಗಿನ ಪಕ್ಷದ ಅಧಿಕೃತ ಸಹಭಾಗಿತ್ವಕ್ಕೆ ಚಾಲನೆ ನೀಡಿದರು. ಈ ಮಹತ್ವದ ಸಭೆಯಲ್ಲಿ ಟಿವಿಕೆಯ ಚುನಾವಣಾ ನಿರ್ವಹಣಾ ಪ್ರಧಾನ ಕಾರ್ಯದರ್ಶಿ ಹಾಗೂ ಸಚಿವ ಆಧಾರ್ ಅರ್ಜುನ್ ಮತ್ತು ಹಣಕಾಸು ಸಚಿವ ಮೇರಿ ವಿಲ್ಸನ್ ಪಕ್ಷವನ್ನು ಪ್ರತಿನಿಧಿಸಿದರು.
"ಇದೊಂದು ಐತಿಹಾಸಿಕ ದಿನ. ನಟ-ರಾಜಕಾರಣಿ ವಿಜಯ್ ಅವರ ಈ ನಿರ್ಧಾರದಿಂದ ಮೈತ್ರಿಕೂಟ ಮತ್ತಷ್ಟು ಬಲಿಷ್ಠವಾಗಲಿದೆ" ಎಂದು ತಮಿಳುನಾಡು ಕಾಂಗ್ರೆಸ್ ಸಮಿತಿ (ಟಿಎನ್ಸಿಸಿ) ಅಧ್ಯಕ್ಷ ಮಣಿಕಂ ಟ್ಯಾಗೋರ್ ಅವರು ಟಿವಿಕೆ ಪಕ್ಷ 'ಇಂಡಿ' ಮೈತ್ರಿಕೂಟಕ್ಕೆ ಸೇರ್ಪಡೆಯಾಗಿರುವುದನ್ನು ಸ್ವಾಗತಿಸಿದ್ದಾರೆ.