ಬೆಂಗಳೂರು,ಅ.02 (DaijiworldNews/AK): ಬಿಜೆಪಿಯವರ ತಂತ್ರ, ಕುತಂತ್ರ ಎಲ್ಲ ಬಿಚ್ಚಿಡ್ತೀನಿ ಎಂದು ಎಸ್ಐಆರ್ ವಿಚಾರವಾಗಿ ಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು. ಗಾಂಧಿ ಜಯಂತಿ ಹಿನ್ನೆಲೆ ವಿಧಾನಸೌಧದಲ್ಲಿ ಮಹಾತ್ಮ ಗಾಂಧಿ ಪ್ರತಿಮೆಗೆ ಸಿಎಂ ಮಾಲಾರ್ಪಣೆ ಮಾಡಿದರು. ಜೊತೆಗೆ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಫೋಟೊಗೂ ಮಾಲಾರ್ಪಣೆ ಮಾಡಿದರು.

54 ಲಕ್ಷ ವೋಟ್ ಡಿಲೀಟ್ ಬಗೆಗಿನ ಹೇಳಿಕೆ ವಿಚಾರವಾಗಿ ಮಾತನಾಡಿದ ಸಿಎಂ, ಬಿಜೆಪಿಯವರ ತಂತ್ರ ಕುತಂತ್ರ ಎಲ್ಲ ಬಿಚ್ಚಿಡ್ತೀನಿ. ಚುನಾವಣಾ ಅಯೋಗ ಏನು ದಡ್ಡರಲ್ಲ. ನನ್ನ ವಿರುದ್ಧ ದೂರು ಕೊಟ್ಟರೆ ಕೊಡಲಿ, ಸಂತೋಷ. ನಾನು ಈ ಸಂದರ್ಭದಲ್ಲಿ ಮಾತನಾಡಲ್ಲ ಎಂದು ಬಿಜೆಪಿಗೆ ಟಾಂಗ್ ಕೊಟ್ಟರು.
ಆರೋಪ ಸಾಬೀತು ಮಾಡುವಂತೆ ವಿಜಯೇಂದ್ರ ಸವಾಲು ಬಗ್ಗೆ ಮಾತನಾಡಿ, ಬಹಳ ಸಂತೋಷ. ಮಾತಾಡೋಣ, ಈ ಜಾಗದಲ್ಲಿ ಬೇಡ. ತಂತ್ರ ಮಂತ್ರ ಎಲ್ಲವನ್ನು ಬಿಚ್ಚಿಟ್ಟಿದ್ದೆ. ಚುನಾವಣಾ ಆಯೋಗ ದಡ್ಡರಲ್ಲ. ಅವರಿಗೆ ನಾನು ಏನು ಬೇಕೋ ಮನದಟ್ಟು ಮಾಡಿದ್ದೇನೆ. ಎಷ್ಟು ಮಾಡಿದ್ರು. ಒಂದು, ಹತ್ತೋ ಐವತ್ತು ಲಕ್ಷನೋ. ಎಲ್ಲವೂ ಬಿಚ್ಚಿ ಬಿಚ್ಚಿ ಬಿಚ್ಚಿ ಮುಂದಿನ ದಿನದಲ್ಲಿ ಹೊರಗೆ ಬರುತ್ತೆ ಎಂದು ತಿಳಿಸಿದರು.
ಸಿಎಂ ವಿರುದ್ಧ ಪೊಲೀಸರಿಗೆ ಬಿಜೆಪಿ ದೂರು ವಿಚಾರವಾಗಿ ಪ್ರತಿಕ್ರಿಯಿಸಿ, ಬಹಳ ಸಂತೋಷ ಇನ್ನು ಮಾಡಬೇಕು. ಅವರೇನು ಮಾಡಿದ್ದಾರೆ ಗೊತ್ತಿಲ್ಲ. ವಿರೋಧ ಪಕ್ಷ ಕಣ್ಣಿಗೆ ಬಟ್ಟೆ ಕಟ್ಟಿ ಕೆಲಸ ಮಾಡ್ತಿದ್ದಾರೆ. ಇಲ್ಲಿ ಬೇಡ ಅದೆಲ್ಲ ಎಂದರು.
ಬಿಜೆಪಿಯವರು ರಾಜಕಾರಣದಲ್ಲಿ ಇರೋದಕ್ಕೆ ನಾಲಾಯಕ್. ಪೊಲೀಸರು ಮೊದಲು ಇವರನ್ನು ಬಂಧಿಸಬೇಕು. ಬಿಜೆಪಿಯವರಿಗೆ ನಾಚಿಕೆ ಆಗಬೇಕೆಂದು ಸಿಎಂ ವಾಗ್ದಾಳಿ ನಡೆಸಿದರು. 24 ಸಾವಿರ ವೋಟ್ ಡಿಲೀಟ್ಗೆ ಮಾತ್ರ ಅರ್ಜಿ ಕೊಟ್ಟಿದ್ದೇವೆ ಅಂತ ಬಿಜೆಪಿ ನಾಯಕರು ಒಪ್ಪಿಕೊಂಡಿದ್ದಾರೆ. ಅವರನ್ನು ಬಂಧಿಸಬೇಕು. ಇವರೆಲ್ಲರೂ ರಾಜಕಾರಣದಲ್ಲಿ ಇರಲು ನಾಲಾಯಕ್ ಎಂದು ಬಿಜೆಪಿ, ಜೆಡಿಎಸ್ ವಿರುದ್ಧ ಆಕ್ರೋಶ ಹೊರಹಾಕಿದರು.