ನವದೆಹಲಿ, ಅ.02 (DaijiworldNews/AK): ಗೊಂಡಾದ ವೈಷ್ಣವಿ ಪೌಲ್ 2022 ರ UPSC ಪರೀಕ್ಷೆಯಲ್ಲಿ 62 ನೇ ರ್ಯಾಂಕ್ ಗಳಿಸಿ ಐಎಎಸ್ ಅಧಿಕಾರಿಯಾದರು. ಮಧ್ಯಮ ವರ್ಗದ ಕುಟುಂಬದ ಹುಡುಗಿಯ ಕಥೆ ಪ್ರತಿಯೊಬ್ಬ UPSC ಆಕಾಂಕ್ಷಿಗಳಿಗೂ ಸ್ಫೂರ್ತಿಯಾಗಿದೆ.

ವೈಷ್ಣವಿ ತನ್ನ ಮಧ್ಯಂತರ ಹಂತದವರೆಗೆ ಗೊಂಡಾದ ಫಾತಿಮಾ ಶಾಲೆಯಲ್ಲಿ ವ್ಯಾಸಂಗ ಮಾಡಿದರು. ನಂತರ ದೆಹಲಿಯ ಲೇಡಿ ಶ್ರೀ ರಾಮ್ ಕಾಲೇಜಿನಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದರು. ನಂತರ ಜೆಎನ್ಯುನಿಂದ ಸ್ನಾತಕೋತ್ತರ ಪದವಿ ಪಡೆದರು.
ವೈಷ್ಣವಿ ತನ್ನ ಸ್ನಾತಕೋತ್ತರ ಪದವಿ ಮುಗಿದ ತಕ್ಷಣ ಯುಪಿಎಸ್ಸಿಗೆ ತಯಾರಿ ಆರಂಭಿಸಿದರು. ಆದರೆ ಅವರು ತನ್ನ ಮೊದಲ ಮೂರು ಪ್ರಯತ್ನಗಳಲ್ಲಿ ವಿಫಲಳಾದರು. ವೈಷ್ಣವಿ ತನ್ನ ನಾಲ್ಕನೇ ಪ್ರಯತ್ನದಲ್ಲಿ ಯಶಸ್ವಿಯಾದರು. 2023 ರಲ್ಲಿ UPSC ನಲ್ಲಿ 62 ನೇ ಶ್ರೇಣಿಯೊಂದಿಗೆ ಅವರು ಐಎಎಸ್ ಅಧಿಕಾರಿಯಾದರು.
ಬಳಿಕ ಐಎಎಸ್ ಅಧಿಕಾರಿ ಹಿಮಾಂಶು ಮಂಗಲ್ ಅವರನ್ನು ವಿವಾಹವಾದರು. ಹಿಮಾಂಶು ಯುಪಿಎಸ್ಸಿ 2023 ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಇಬ್ಬರೂ ತಮಿಳುನಾಡು ಕೇಡರ್ನಲ್ಲಿ ನೇಮಕಗೊಂಡರು. ಇವರು 2023ರ ಬ್ಯಾಚ್ನ ತಮಿಳುನಾಡು ಕೆಡರ್ನ ಐಎಎಸ್ ಅಧಿಕಾರಿಯಾಗಿದ್ದು, ತಮಿಳುನಾಡಿನ ತೆಂಕಾಸಿ ಜಿಲ್ಲೆಯ ಸಬ್ ಕಲೆಕ್ಟರ್ (ಉಪ ಜಿಲ್ಲಾಧಿಕಾರಿ) ಆಗಿ ಸೇವೆ ಸಲ್ಲಿಸುತ್ತಿದ್ದಾರೆ.