ಬೆಂಗಳೂರು, ಸೆ.19 (DaijiworldNews/AA): ಡಿಕೆ ಶಿವಕುಮಾರ್ ಅವರು ಮನಸ್ಸು ಮಾಡಿದ್ರೆ, ತಮ್ಮ ಸ್ವಂತ ಹಣದಲ್ಲೇ ಸಾಲ ಮನ್ನಾ ಮಾಡಬಹುದು ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಡಿಕೆ ಶಿವಕುಮಾರ್ ಅವರು ಮನಸು ಮಾಡಿದ್ರೆ, ತಮ್ಮ ಸ್ವಂತ ಹಣದಲ್ಲೇ ಸಾಲ ಮನ್ನಾ ಮಾಡಬಹುದು. ರೈತರು ಸಾಲಮನ್ನಾ ಆಗಬೇಕು ಅಂತ ಹೇಳ್ತಿದ್ದಾರೆ. ಸಿಎಂ ಕೂಡಾ ಸಿದ್ದರಾಮಯ್ಯ, ಕುಮಾರಸ್ವಾಮಿ ಕಾಲದಲ್ಲಿ ಸಾಲ ಮನ್ನಾ ಆಗಿದೆ. ನಾನು ಸಾಲಮನ್ನಾ ಮಾಡಿಲ್ಲ ಅಂದ್ರೆ 2028 ಚುನಾವಣೆಗೆ ಕಷ್ಟ ಆಗುತ್ತೆ ಅಂತ ಹೀಗಾಗಿ ದುಡ್ಡು ಹೊಂದಿಸಿ ಅಂತ ಹೇಳ್ತಾರೆ. ಡಿಕೆ ಶಿವಕುಮಾರ್ ಮನಸ್ಸು ಮಾಡಿದ್ರೆ ಸಾಲ ಮನ್ನಾ ಮಾಡೋಕೆ ಆರ್ಥಿಕ ಇಲಾಖೆ ಬೇಕಿಲ್ಲ" ಎಂದರು.
"ಬೆಂಗಳೂರು ಸುತ್ತಮುತ್ತ ಸಾವಿರಾರು ಕೋಟಿ ಆಸ್ತಿ ನುಂಗಲು ಹೊರಟಿದ್ದಾರೆ. ನೈಸ್ ಹೆಸರಿನಲ್ಲಿ ಸಾವಿರಾರು ಕೋಟಿ ನುಂಗೋಕೆ ಹೊರಟಿದ್ದಾರೆ. ಮನಸ್ಸು ಮಾಡಿದ್ರೆ ಡಿಕೆಶಿ ತಮ್ಮ ಕೈಯಿಂದಲೇ ಸಾಲ ಮನ್ನಾ ಮಾಡಬಹುದು. ವೈಯಕ್ತಿಕವಾಗಿಯೇ ಸಾಲ ಮನ್ನಾ ಮಾಡಬಹುದು. ಇತ್ತೀಚೆಗೆ ಬಹಳ ಬದಲಾವಣೆ ಆಗಿರೋ ರೀತಿ ತೋರಿಸ್ತಾ ಇದ್ದಾರೆ. ಅದು ಕಾರ್ಯ ರೂಪಕ್ಕೆ ಇಲ್ಲಿವರೆಗೂ ಹಲವಾರು ರೀತಿ ಸಂಪಾದನೆ ಮಾಡಿರೋ ಹಣವನ್ನ ಜನರ ಪರವಾಗಿ ಕೊಟ್ಟರೆ 2028ಕ್ಕೂ, ಮುಂದೆಯೂ ನಾನೇ ಸಿಎಂ ಅಂತ ಹೇಳ್ತಾ ಇದ್ದಾರೆ. ಇದು ಮಾಡಿದ್ರೆ ಅದೂ ಆಗಬಹುದು" ಎಂದು ಹೇಳಿದರು.