ಹುಬ್ಬಳ್ಳಿ, ಸೆ.15 (DaijiworldNews/AA): ರಾಜ್ಯ ಸರ್ಕಾರದ ನಾಯಕರ ಟ್ಯೂಬ್ಲೈಟ್ ಲೇಟಾಗಿ ಹೊತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.

"ಲೇಟಾಗಿ ಪ್ರಧಾನಮಂತ್ರಿ ಕುಸುಮ ಯೋಜನೆ ಜಾರಿ ಮಾಡ್ತಿದ್ದಾರೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರ ಹತ್ಯೆ ನಂತರ ಅವರ ಚಿತಾಭಸ್ಮ ತೆಗೆದುಕೊಂಡು ಹೋಗಿ ಚುನಾವಣೆ ಮಾಡಲಾಯ್ತು. ಕಾಂಗ್ರೆಸ್ ಎಮೋಷನಲ್ ಪಾಲಿಟಿಕ್ಸ್ ಮಾಡ್ತು ಎಂದು ಆರೋಪಿಸಿದ ಅವರು, ಆದ್ರೆ ಇದೀಗ ಕಾರ್ಯ ಕ್ಷಮತಾ ರಾಜಕಾರಣ ಮಾಡುತ್ತಿದ್ದೇವೆ" ಎಂದು ತಿಳಿಸಿದ್ದಾರೆ.
"ಜಿಡಿಪಿ ಅಂಕಿ ಅಂಶಗಳನ್ನು ಮುಚ್ಚಿಡಲು ಆಗಲ್ಲ. ದೇಶದಲ್ಲಿ ಹೂಡಿಕೆ ಮಾಡಲು ಮುಂದೆ ಬರ್ತಿದ್ದಾರೆ, ರಫ್ತು ಹೆಚ್ಚಾಗಿದೆ. ಮುಂದಿನ ವರ್ಷ ಭಾರತೀಯ ಡಿಸೈನ್ ಹಾಗೂ ಮೊಬೈಲ್ ಬರಲಿದೆ. ಹೀಗಿದ್ದರೂ ದೇಶದ ಯಶಸ್ಸಿನ ವಿರುದ್ಧ ಮಾತನಾಡುವುದು ಕಾಂಗ್ರೆಸ್ ಭಾಗವಾಗಿದೆ. ರೈತರ ಹಿತ ಕಾಪಾಡಲು ಕೇಂದ್ರ ಸರ್ಕಾರ ಬದ್ಧವಾಗಿದ್ದು, ಮಳೆ ಕೊರತೆಯಿಂದ ದೇಶದಲ್ಲಿ ಕೆಲವು ವಸ್ತುಗಳ ಬೆಲೆ ಏರಿಕೆಯಾಗಿದೆ. ಅದನ್ನು ನಿಯಂತ್ರಣ ಮಾಡಲು ಕೇಂದ್ರ ಸರ್ಕಾರ ಪ್ರಯತ್ನ ಮಾಡ್ತಿದೆ" ಎಂದು ಹೇಳಿದ್ದಾರೆ.
"ಜಗತ್ತಿನ ಕಠಿಣ ಸ್ಥಿತಿಯ ನಡುವೆಯೂ ದೇಶದ ಆರ್ಥಿಕತೆ ಸದೃಢವಾಗಿದೆ. ಇದನ್ನು ಬ್ರಿಕ್ಸ್ ಸಭೆಯಲ್ಲಿ ಜಗತ್ತಿನ ಅನೇಕರು ಕೊಂಡಿಡಿದ್ದಾರೆ. ಆದರೆ ವಿರೋಧ ಪಕ್ಷದ ನಾಯಕರು ಅಲ್ಲಿನ ಮೆನು ಬಗ್ಗೆ ಮಾತಾಡ್ತಿದ್ದಾರೆ. 81 ಕೋಟಿ ಜನರಿಗೆ ಉಚಿತವಾಗಿ ಪ್ರತಿ ತಿಂಗಳು ಅಕ್ಕಿ ನೀಡುತ್ತಿದ್ದೇವೆ" ಎಂದಿದ್ದಾರೆ.
"ಪ್ರಧಾನಿ ಜನ್ಮದಿನದ ಅಂಗವಾಗಿ ಬಿಜೆಪಿಯಿಂದ ಸೆಪ್ಟೆಂಬರ್ 17ರಿಂದ ಅಕ್ಟೋಬರ್ 17ರ ವರಗೆ ಸೇವಾ ಸಂಕಲ್ಪ ಸಪ್ತಾಹ ಆಚರಣೆ ನಡೆಯಲಿದೆ. ಜನಸೇವೆಯೇ ಪ್ರಭುಸೇವೆ ಅನ್ನೋ ಧ್ಯೇಯವಾಕ್ಯದೊಂದಿಗೆ ಸಪ್ತಾಹ ನಡೆಯಲಿದ್ದು, ಸೆಪ್ಟೆಂಬರ್ 17ರಂದು ಪ್ರತಿ ಮನೆ ಮುಂದೆ ಆಶೀರ್ವಾದ ದೀಪವನ್ನು ಹಚ್ಚಲಾಗುವದು" ಎಂದು ಮಾಹಿತಿ ನೀಡಿದ್ದಾರೆ.