ಬೆಂಗಳೂರು, ಆ. 20 (DaijiworldNews/AK): ನಕಲಿ ಖಾತೆಗಳಿಗೆ ಹಣ ಹೇಗೆ ವರ್ಗಾವಣೆ ಮಾಡಬೇಕು ಎಂಬುದರಲ್ಲಿ ತಜ್ಞರಾಗಿರುವ ನಾಗೇಂದ್ರ ಅವರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಅಂಕಿ- ಅಂಶಗಳ ಖಾತೆ ನೀಡುವ ಬದಲು ಹಣಕಾಸು ಖಾತೆ ನೀಡಬೇಕು ಎಂದು ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಹೇಳಿದ್ದಾರೆ.

ವಿಧಾನಸೌಧದ ಬಿಜೆಪಿ ಕಚೇರಿಯಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಗೇಂದ್ರ ಅವರನ್ನು ಹಣಕಾಸು ಖಾತೆ ಸಚಿವರಾಗಿ ಮಾಡಿದರೆ ರಾಜ್ಯದ ಖಜಾನೆ ಹಣವನ್ನು ದೇಶದ ವಿವಿಧ ಬ್ಯಾಂಕ್ಗಳ ಖಾತೆಗೆ ಚೆನ್ನಾಗಿ ವರ್ಗಾವಣೆ ಮಾಡಿ ಲೂಟಿ ಮಾಡುತ್ತಾರೆ. ವಾಲ್ಮೀಕಿ ನಿಗಮದ ಬಹುಕೋಟಿ ಹಗರಣದಲ್ಲಿ ಷರತ್ತಿನ ಮೇಲೆ ಜಾಮೀನು ಪಡೆದು ಸಚಿವ ನಾಗೇಂದ್ರ ಅವರು ಹೊರಗೆ ಇದ್ದಾರೆ. ಅವರು ಆರೋಪಮುಕ್ತರಾಗಿಲ್ಲ. ಅವರ ರಾಜೀನಾಮೆವರೆಗೆ ಬಿಜೆಪಿ ಹೋರಾಟ ಮಾಡಲಿದೆ. ನಾಗೇಂದ್ರ ಅವರು ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳಿಗೆ ಮತ್ತು ಹೈಕಮಾಂಡಿಗೆ ಬ್ಲ್ಯಾಕ್ಮೇಲ್ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಅದು ಪಸೆರ್ಂಟೇಜ್ ಕಥೆ ಅಲ್ಲ. ಅದು ಇಡಿಯಾಗಿ ನುಂಗಿದ ಕರ್ನಾಟಕ ರಾಜ್ಯದ ಇತಿಹಾಸದಲ್ಲೇ ನಿರ್ಭಯವಾಗಿ ನಡೆಸಿದ ಬಹುದೊಡ್ಡ ಲೂಟಿ ಎಂದರು.
ಪರಿಶಿಷ್ಟ ಸಮುದಾಯಕ್ಕೆ ಮಾಡಿದ ಅಪಮಾನ
ಇಲಾಖೆಯ ಸಚಿವರು, ಎಂಡಿ, ಲೆಕ್ಕಾಧಿಕಾರಿ, ಪಿಎ ಹೀಗೆ ಎಲ್ಲರೂ ಸೇರಿ ಪರಿಶಿಷ್ಟ ಪಂಗಡದ ಕಲ್ಯಾಣಕ್ಕಾಗಿ ಬಳಕೆಯಾಗಬೇಕಾದ ಹಣವನ್ನು ತಮ್ಮ ಕಲ್ಯಾಣಕ್ಕೆ ಬಳಸಿಕೊಂಡರು. ಇದು ಪರಿಶಿಷ್ಟ ಸಮುದಾಯಕ್ಕೆ ಮಾಡಿದ ಅಪಮಾನ ಎಂದು ಆರೋಪಿಸಿದರು.
ಆರೋಪಿಗಳು ನಿಗಮದ ಹಣವನ್ನು ನಕಲಿ ಖಾತೆಗಳಿಗೆ ವರ್ಗಾಯಿಸಿ ್ಟಚಾರ ನಡೆಸಿದರು. ಹದಿನಾಲ್ಕು ಜನರ ಮೇಲೆ ಎಫ್ಐಆರ್ ದಾಖಲಾಗಿ ಬಂಧನಕ್ಕೊಳಗಾಗಿದ್ದರು. ಕೆಲವರು ನ್ಯಾಯಾಲಯದ ಷರತ್ತಿನ ಮೇಲೆ ಜಾಮೀನು ಪಡೆದರೆ ಇನ್ನೂ ಕೆಲವರು ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ವಿವರಿಸಿದರು.
ಸಂವಿಧಾನ ಭ್ರಷ್ಟರಿಗೆ ರಕ್ಷಣೆ ಕೊಡಲ್ಲ...
ನಮ್ಮ ಸಂವಿಧಾನವು ಪ್ರತಿಯೊಬ್ಬ ಭಾರತೀಯರ ರಕ್ಷಣೆಗೆ ಇರುವುದು. ಯಾರೇ ಭ್ರಷ್ಟಚಾರ ನಡೆಸಿದರೆ ಅವರಿಗೆ ಶಿಕ್ಷೆ ಕೊಡಿ ಎಂದು ಸಂವಿಧಾನ ಹೇಳಿದೆ.
ಸಚಿವರಾದಾಗ ನಾಗೇಂದ್ರ ಅವರು ಸಂವಿಧಾನದ ಪ್ರತಿ ಹಿಡಿದು ಸಂವಿಧಾನ ರಕ್ಷಣೆ ಕೊಡುತ್ತೆ ಅಂತ ಹೇಳಿದರು. ಆದರೆ ಸಂವಿಧಾನ ಭ್ರಷ್ಟರಿಗೆ ರಕ್ಷಣೆ ಕೊಡಲ್ಲ. ಅದು ಶಿಕ್ಷೆ ನೀಡುತ್ತದೆ. ನಾಗೇಂದ್ರ ಅವರು ಸಂವಿಧಾನದ ಮೌಲ್ಯಗಳಿಗೆ ಅಪಚಾರ ಎಸಗಿದ್ದಾರೆ ಎಂದರು.