ಬೆಂಗಳೂರು, ಆ. 19 (DaijiworldNews/AA): ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪವಿತ್ರಾ ಗೌಡ ಅವರ ಮಾಜಿ ಪತಿ ಸಂಜಯ್ ಸಿಂಗ್ ನಿಧನರಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ.

7-8 ತಿಂಗಳ ಹಿಂದೆಯೇ ಪವಿತ್ರಾ ಗೌಡ ಅವರ ಮಾಜಿ ಪತಿ ಮೃತಪಟ್ಟಿದ್ದಾರೆ. ಆದರೆ ಈ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ. ಹಲವಾರು ವರ್ಷಗಳಿಂದ ಅನಾರೋಗ್ಯ ತುತ್ತಾಗಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೇ ರಾಜಸ್ಥಾನದಲ್ಲಿ ಮೃತಪಟ್ಟಿದ್ದಾರೆ.
2007 ಹಾಗೂ 2008ರ ನಡುವೆ ಪ್ರೀತಿಸಿ ಮದುವೆಯಾಗಿದ್ದ ಸಂಜಯ್ ಸಿಂಗ್ ಪವಿತ್ರಾ ಗೌಡ ಜೋಡಿಗೆ ಓರ್ವ ಮಗಳಿದ್ದಾರೆ. ಬಳಿಕ 2011 ರಲ್ಲೇ ಪವಿತ್ರಾ ಜೊತೆ ಅವರ ವಿಚ್ಛೇದನ ಆಗಿತ್ತು. ವಿಚ್ಛೇದನದ ಬಳಿಕ ಮಾಜಿ ಪತಿಯ ಸಂಪರ್ಕ ಸಂಪೂರ್ಣ ದೂರವಾಗಿದ್ದ ಪವಿತ್ರಾ ಗೌಡ ಇದೀಗ ಕೊಲೆ ಕೇಸ್ ಆರೋಪಿಯಾಗಿ ಜೈಲಲ್ಲಿದ್ದಾರೆ.