ಬೆಂಗಳೂರು,ಆ. 19 (DaijiworldNews/AK): ಶಿಕ್ಷಣ ಸಂಸ್ಥೆಗಳು, ಸಂಘ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳಿಗೆ ಸರ್ಕಾರ ಕೊಟ್ಟಿರುವ ಭೂಮಿಯನ್ನ ನಿಗದಿತ ಉದ್ದೇಶಕ್ಕೆ ಬಳಕೆ ಮಾಡದೇ ಹೋದರೆ ಸರ್ಕಾರ ಅದನ್ನ ಮರುವಶಪಡಿಸಿಕೊಳ್ಳಲಿದೆ ಎಂದು ಡಿಸಿಎಂ ಪರಮೇಶ್ವರ್ ತಿಳಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ನ ಶಿವಕುಮಾರ್ ಪ್ರಶ್ನೆ ಕೇಳಿದರು. ಕೊಟ್ಟಿರುವ ಸಂಘ ಸಂಸ್ಥೆಗಳಿಗೆ, ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ಭೂಮಿ ನೀಡುತ್ತಿದೆ. ಅವರು ಯಾವ ಉದ್ದೇಶಕ್ಕೆ ಅಂತ ಭೂಮಿ ಪಡೆದಿದ್ದರೋ ಅದಕ್ಕೆ ಬಳಕೆ ಮಾಡಿಕೊಳ್ತಿಲ್ಲ. ಧಾರ್ಮಿಕ ಸಂಘಗಳಿಗೆ ಸರ್ಕಾರ ಭೂಮಿ ನೀಡಬಾರದು ಅಂತ ಒತ್ತಾಯಿಸಿದರು.
ಇದಕ್ಕೆ ಡಿಸಿಎಂ ಪರಮೇಶ್ವರ್ ಉತ್ತರ ನೀಡಿ, ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳಿಗೆ 2010-26ರವರೆಗೆ ಸರ್ಕಾರ ಜಮೀನು ನೀಡಲಾಗಿದೆ. ಸುಮಾರು 2,400 ಎಕರೆಗೂ ಹೆಚ್ಚು ಭೂಮಿ ಕೊಡಲಾಗಿದೆ. ಎಲ್ಲಾ ಸರ್ಕಾರಗಳು ಜಮೀನು ಕೊಟ್ಟಿವೆ. ಪಡೆದ ಉದ್ದೇಶಕ್ಕೆ ಜಮೀನುಗಳನ್ನು ಬಳಸಿಕೊಳ್ಳುತ್ತಿದ್ದಾರಾ? ಇಲ್ಲವಾ ಎಂದು ಪರಿಶೀಲನೆ ನಡೆಸಲು 2020ರಲ್ಲೇ ಡಿಸಿಗಳಿಗೆ ಸೂಚನೆ ನೀಡಲಾಗಿದೆ. ಯಾರು ಉಪಯೋಗ ಮಾಡಿಲ್ಲ ಅಥವಾ ಕೇಳಿದ ಉದ್ದೇಶಕ್ಕೆ ಬಳಕೆ ಆಗದೇ ಹೋದ್ರೆ ಆ ಜಮೀನು ವಾಪಸ್ ಪಡೆಯುತ್ತೇವೆ ಎಂದಿದ್ದಾರೆ.