ಬೆಂಗಳೂರು,ಆ. 04 (DaijiworldNews/AK): ಮಹಿಳೆಯರಿಗಾಗಿ ‘ಋತುತಾರೆ’ ಎಂಬ ಹೊಸ ಯೋಜನೆಯೊಂದನ್ನು ರಾಜ್ಯ ಸರ್ಕಾರ ಜಾರಿಗೆ ತರುತ್ತಿದ್ದು, ಈ ಬಗ್ಗೆ ಸ್ವತಃ ಆರೋಗ್ಯ ಸಚಿವ ಯು.ಟಿ. ಖಾದರ್ ಘೋಷಣೆ ಮಾಡಿದ್ದಾರೆ.

ಮಹಿಳೆಯರು ಮಾನಸಿಕ ಒತ್ತಡ, ಸಮಸ್ಯೆ ಅನಭವಿಸುತ್ತಿದ್ದಾರೆ. ಹೀಗಾಗಿ ಮೆನೋಪಾಸ್ ಸಂಬಂಧ ಮಹಿಳಾ ತಜ್ಞೆ ಜೋಸ್ನಾ ಅಧ್ಯಕ್ಷೆತೆಯಲ್ಲಿ ಸಮಿತಿ ರಚಿಸಿದ್ದೇವೆ. ನಟಿ ರಮ್ಯಾ ಈ ಕಾರ್ಯಕ್ರಮದ ಬ್ರ್ಯಾಂಡ್ ಅಂಬಾಸಿಡರ್ ಆಗಿರಲಿದ್ದಾರೆ. ಆಶಾ ಕಾರ್ಯಕರ್ತೆಯರು ಮನೆಮನೆಗೆ ಹೋಗಿ ಮಹಿಳೆಯರ ಡೇಟಾ ತೆಗೆದುಕೊಳ್ಳಲಿದ್ದು, ಪ್ರೀ ಮೆನೋಪಾಸ್ ಹಾಗೂ ಪೋಸ್ಟ್ ಮೆನೋಪಾಸ್ ಕುರಿತು ಯಾವೆಲ್ಲಾ ಕ್ರಮ ತೆಗೆದುಕೊಳ್ಳಬೇಕು ಎನ್ನುವುದನ್ನು ತಿಳಿಸಲಿದ್ದಾರೆ ಎಂದವರು ತಿಳಿಸಿದ್ದಾರೆ.
ಮಹಿಳೆಯರನ್ನು ಕಾಡುತ್ತಿರುವ ಮೆನೋಪಾಸ್ ಸಮಸ್ಯೆ ಕುರಿತು ಸೂಕ್ತ ಕ್ರಮಕ್ಕೆ ನಟಿ ರಮ್ಯಾ ಒತ್ತಾಯಿಸಿದ್ದರು. ಈ ಹಿನ್ನಲೆ ಆರೋಗ್ಯ ಸಚಿವ ಯು.ಟಿ. ಖಾದರ್ ಜೊತೆ ನಟಿ ರಮ್ಯ ಹಾಗೂ ಇತರೆ ಪರಿಣಿತರೊಂದಿಗೆ ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಮಹತ್ವದ ಸಂವಾದ ನಡೆಸಲಾಗಿದ್ದು, ಎಲ್ಲರ ಸಲಹೆ ಮತ್ತು ಸೂಚನೆಗಳನ್ನು ಆಲಿಸಿದ ಬಳಿಕ ಸರ್ಕಾರ ಈ ತೀರ್ಮಾನ ಮಾಡಿರೋದಾಗಿ ಸಚಿವರು ತಿಳಿಸಿದ್ದಾರೆ.