ಬಿಹಾರ, ಆ. 04 (DaijiworldNews/TA):ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ UPSC ಸಿವಿಲ್ ಸರ್ವೀಸಸ್ ಪರೀಕ್ಷೆಯನ್ನು ಭೇದಿಸಲು ಲಕ್ಷಾಂತರ ಅಭ್ಯರ್ಥಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಅಂತವರಿಗೆ ಈ ಯಶಸ್ಸಿನ ಕಥೆಗಳು ಮತ್ತಷ್ಟು ಪರಿಶ್ರಮಿಸಲು ಪ್ರೇರೇಪಿಸುತ್ತವೆ. ಯುಪಿಎಸ್ ಸಿ ಪರೀಕ್ಷಾ ಸಾಧಕರಾದ ಐಎಎಸ್ ಅಂಶು ಪ್ರಿಯಾ ಅವರ ಸ್ಪೂರ್ತಿದಾಯ ಕಥೆ.

ಅಂಶು ಪ್ರಿಯಾ ಎಂಬಿಬಿಎಸ್ ಪದವಿಯ ನಂತರ ಯುಪಿಎಸ್ಸಿ ಅನ್ನು ಭೇದಿಸಿ IAS ಅಧಿಕಾರಿಯಾಗಿದ್ದಾರೆ. ಐಎಎಸ್ ಅಂಶು ಪ್ರಿಯಾ ಹುಟ್ಟಿದ್ದು ಬಿಹಾರದ ಮುಂಗೇರ್ ಜಿಲ್ಲೆಯಲ್ಲಿ. ಅವರ ತಂದೆ ಮುಂಗೇರ್ನ ಗರ್ಲ್ಸ್ ಮಿಡಲ್ ಸ್ಕೂಲ್ ನ ಪ್ರಾಂಶುಪಾಲರು.
ಅಂಶು ಪ್ರಿಯಾ ಅವರು ಮುಂಗೇರ್ ನಲ್ಲಿರುವ ನೆಟ್ರೋಡೆಮ್ ಅಕಾಡೆಮಿ ಮತ್ತು ದರ್ಭಾಂಗದ ಮುಂಗೇರ್ನಲ್ಲಿರುವ ಹೈಯರ್ ಸೆಕೆಂಡರಿ ಶಾಲೆಯಲ್ಲಿ ತಮ್ಮ ಅಧ್ಯಯನವನ್ನು ಮಾಡಿದರು. ಇದಾದ ನಂತರ ವೈದ್ಯಕೀಯ ಸಿದ್ಧತೆಗಾಗಿ ಕೋಟಾಗೆ ತೆರಳಿದ್ದರು. ಅವರು ಪಾಟ್ನಾ ಏಮ್ಸ್ ನಲ್ಲಿ ಎಂಬಿಬಿಎಸ್ ಮಾಡಿದ್ದಾರೆ. ನಂತರ, ಅಂಶು AIIMS ಪಾಟ್ನಾದಲ್ಲಿ ರೆಸಿಡೆಂಟ್ ವೈದ್ಯೆಯಾಗಿ ಸೇವೆ ಸಲ್ಲಿಸಲು ಪ್ರಾರಂಭಿಸಿದರು.
ಇದಾದ ಬಳಿಕ ಯುಪಿಎಸ್ ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಐಎಎಸ್ ಆಗಲು ನಿರ್ಧರಿಸಿದ್ದರು. ಆದರೆ ಸತತ ಮೂರು ಬಾರಿ ವೈಫಲ್ಯ ಎದುರಿಸಬೇಕಾಯಿತು. ಅಂಶು ಪ್ರಿಯಾ 2019 ರಲ್ಲಿ ಮೊದಲ ಬಾರಿಗೆ UPSC ನಾಗರಿಕ ಸೇವೆಗಳ ಪರೀಕ್ಷೆಯನ್ನು ನೀಡಿದರು. ಮೊದಲ ಎರಡು ಪ್ರಯತ್ನಗಳಲ್ಲಿ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಸಾಧ್ಯವಾಗಲಿಲ್ಲ. 2021 ರಲ್ಲಿ ತಮ್ಮ 3ನೇ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಅಖಿಲ ಭಾರತ 16 ನೇ ರ್ಯಾಂಕ್ ಗಳಿಸಿದರು. ಮೂರನೇ ಪ್ರಯತ್ನದಲ್ಲಿ ಶ್ರಮಕ್ಕೆ ತಕ್ಕ ಫಲ ಸಿಕ್ಕಿತು.