ಪಾಟ್ನಾ, ಆ. 03 (DaijiworldNews/AK): ಬಂಕಿಪುರ ಉಪಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿ ಭದ್ರಕೋಟೆಯಲ್ಲಿ ಜನ್ ಸುರಾಜ್ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಐತಿಹಾಸಿಕ ಜಯಗಳಿಸಿದ್ದಾರೆ.

ಜನ್ ಸುರಾಜ್ಗೆ ಇದು ಮೊದಲ ಗೆಲುವು. ಬಿಜೆಪಿ ಪ್ರತಿಸ್ಪರ್ಧಿ ನೀರಜ್ ಕುಮಾರ್ ಅವರನ್ನು ಸೋಲಿಸಿ 19,000 ಕ್ಕೂ ಹೆಚ್ಚು ಮತಗಳಿಂದ ಉಪಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ಗೆಲವು ಪಡೆದುಕೊಂಡಿದ್ದಾರೆ.
1995 ರಿಂದ ಬಂಕಿಪುರ ಕ್ಷೇತ್ರದ ಮೇಲಿನ ಬಿಜೆಪಿಯ ಮೂರು ದಶಕಗಳ ಹಿಡಿತವನ್ನು ಕೊನೆಗೊಳಿಸಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಹಲವಾರು ಅವಧಿಗಳಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು.
ನನ್ನ ಕಚೇರಿ ಬಾಗಿಲುಗಳು ಬಂಕಿಪುರದ ಜನರಿಗೆ ಮಾತ್ರವಲ್ಲ, ಇಡೀ ಬಿಹಾರಕ್ಕೂ ತೆರೆದಿವೆ. ನಾನು ಇಲ್ಲಿ ಅಸಾಧಾರಣವಾದದ್ದೇನೂ ಮಾಡಿಲ್ಲ. ಆದರೆ, ಕೇವಲ 30 ದಿನಗಳಲ್ಲಿ 30 ವರ್ಷಗಳ ಬಿಜೆಪಿಯ ಭದ್ರಕೋಟೆಯನ್ನು ಕೆಡವಿದ್ದೇನೆ ಎಂದು ಗೆಲುವಿನ ಬಳಿಕ ಪ್ರಶಾಂತ್ ಕಿಶೋರ್ ಮಾತನಾಡಿದ್ದಾರೆ.