ಬೆಂಗಳೂರು, ಆ. 03 (DaijiworldNews/ AK): ಸಿದ್ದರಾಮಯ್ಯ ಕ್ಯಾಬಿನೆಟ್ನಲ್ಲಿ ನನಗೆ ಮಂತ್ರಿಸ್ಥಾನ ಕೈತಪ್ಪಿತ್ತು, ಆಮೇಲೆ ನಾನು ಸಚಿವನಾಗಿಲ್ವಾ? ಎಂದು ಅಸಮಾಧಾನಿತ ಶಾಸಕರ ರಾಜೀನಾಮೆ ನಡೆಗೆ ಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಲೋಕಭವನಕ್ಕೆ ತೆರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲರೂ ತಾಳ್ಮೆಯಿಂದ ಇರಬೇಕೆಂದು ಮನವಿ ಮಾಡುತ್ತೇನೆ. ಶಾಸಕರು ಹೆಚ್ಚಿದ್ದಾರೆ ಎಲ್ಲರಿಗೂ ಕೊಡೋಕೆ ಆಗಲ್ಲ. ಹಿಂದೆ ನನಗೆ ಸಿದ್ದರಾಮಯ್ಯ ಕ್ಯಾಬಿನೆಟ್ನಲ್ಲಿ ಮಂತ್ರಿ ಸ್ಥಾನ ತಪ್ಪಿತ್ತು. ಆ ಮೇಲೆ ನಾನು ಮಂತ್ರಿ ಆಗಿರಲಿಲ್ಲವಾ? ಎಂದು ಹೇಳಿದ್ದಾರೆ. ತಾಳ್ಮೆಯಿಂದ ಇರಬೇಕು, ಎಲ್ಲರಿಗೂ ಅವಕಾಶ ಕೊಡಿಸುವ ಕೆಲಸ ಮಾಡುತ್ತೇನೆ ಎಂದರು.
ರಾಜೀನಾಮೆ ಕೊಡುತ್ತೇವೆ ಎಂದು ಬ್ಲ್ಯಾಕ್ಮೇಲ್ ಮಾಡಿದವರಿಗೆ ಹೈಕಮಾಂಡ್ ಶಾಕ್ ಕೊಟ್ಟಿದೆ. ಯಾರಾದ್ರೂ ರಾಜೀನಾಮೆ ಕೊಟ್ರೆ ಸ್ವೀಕಾರ ಮಾಡಿ. ಸಚಿವ ಸ್ಥಾನ ವಂಚಿತರಿಗೆ ಬೇರೆ ಬೇರೆ ಸ್ಥಾನ ಕೊಡುತ್ತೇವೆ. ಅದನ್ನು ಮೀರಿ ರಾಜೀನಾಮೆ ಕೊಟ್ಟರೆ ರಾಜೀನಾಮೆ ಸ್ವೀಕರಿಸುವಂತೆ ಸಿಎಂಗೆ ಹೈಕಮಾಂಡ್ ಸೂಚನೆ ನೀಡಿದೆ.