ಬೆಂಗಳೂರು, ಆ. 03 (DaijiworldNews/AA): ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಕ್ಷಣಗಣನೆ ಆರಂಭವಾಗಿದ್ದು, ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಸಚಿವ ಸಂಪುಟದ ಪ್ರಮಾಣವಚನ ಸ್ವೀಕಾರ ಸಮಾರಂಭ ಸೋಮವಾರ ಸಂಜೆ 4.05 ಗಂಟೆಗೆ ನಡೆಯಲಿದೆ.

ಲೋಕಭವನದ ಗಾಜಿನ ಮನೆಯಲ್ಲಿ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ. ಈ ಸಮಾರಂಭದಲ್ಲಿ ನೂತನ ಸಚಿವರಿಗೆ ಪ್ರಮಾಣವಚನ ಬೋಧನೆ ಮಾಡಲಾಗುತ್ತದೆ. ಭದ್ರತಾ ದೃಷ್ಟಿಯಿಂದ ಸುಮಾರು 2,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಲೋಕಭವನ ಸುತ್ತಮುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಸಂಪುಟ ಸೇರಲಿರುವ ನೂತನ ಸಚಿವರ ಪಟ್ಟಿ ಇಂತಿದೆ...
ಪಿಎಂ ನಾರಾಯಣ ಸ್ವಾಮಿ
ಶಿವರಾಜ್ ತಂಗಡಗಿ
ರುದ್ರಪ್ಪ ಲಮಾಣಿ
ಕೆ.ಎಸ್.ಬಸವಂತಪ್ಪ
ಟಿ. ರಘುಮೂರ್ತಿ
ಬಿ ನಾಗೇಂದ್ರ
ಜಮೀರ್
ರಿಜ್ವಾನ್ ಅರ್ಷದ್
ಸಂತೋಷ್ ಲಾಡ್
ಮಧು ಬಂಗಾರಪ್ಪ
ಪುಟ್ಟರಂಗ ಶೆಟ್ಟಿ
ಮಂಕಾಳ ವೈದ್ಯ
ಅಜಯ್ ಸಿಂಗ್
ಚೆಲುವರಾಯಸ್ವಾಮಿ
ಎಂ ಶಿವಲಿಂಗೇಗೌಡ
ಹೆಚ್ ಸಿ ಬಾಲಕೃಷ್ಣ
ಗಾಯತ್ರಿ ಶಾಂತೇಗೌಡ
ವಿಜಯಾನಂದ ಕಾಶಪ್ಪನವರ್
ಲಕ್ಷ್ಮಣ್ ಸವದಿ
ಬಸವರಾಜ್ ರಾಯರೆಡ್ಡಿ
ಜಿ. ಎಸ್. ಪಾಟೀಲ್ (ಸಭಾಧ್ಯಕ್ಷರು)
ಎ. ಎಸ್. ಪೊನ್ನಣ್ಣ (ಉಪಸಭಾಧ್ಯಕ್ಷರು)