ನವದೆಹಲಿ, ಆ. 01 (DaijiworldNews/AA): ಪೆಟ್ರೋಲ್ಗೆ ಎಥೆನಾಲ್ ಮಿಶ್ರಣ (E20) ಮಾಡದೇ ಇದ್ದಿದ್ದರೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್ಗೆ 135 ಡಾಲರ್ಗೆ ಏರಿದ್ದ ಸಂದರ್ಭದಲ್ಲಿ ದೆಹಲಿಯಲ್ಲಿ ಪೆಟ್ರೋಲ್ ದರವು ಲೀಟರ್ಗೆ ಸುಮಾರು 125 ರೂ. ತಲುಪುತ್ತಿತ್ತು ಎಂದು ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಹೇಳಿದೆ.

ದೇಶೀಯವಾಗಿ ಪೂರ್ವನಿಗದಿತ ದರದಲ್ಲಿ ಖರೀದಿಸಿದ ಎಥೆನಾಲ್ ಅನ್ನು ಪೆಟ್ರೋಲ್ನಲ್ಲಿ ಶೇ.20ರಷ್ಟು ಮಿಶ್ರಣ ಮಾಡಿದ್ದರಿಂದ ಗ್ರಾಹಕರು ಪ್ರತಿ ಲೀಟರ್ಗೆ 94.77 ರೂ. ದರದಲ್ಲೇ ಪೆಟ್ರೋಲ್ ಖರೀದಿಸಲು ಸಾಧ್ಯವಾಯಿತು. ಜಾಗತಿಕ ಕಚ್ಚಾ ತೈಲದ ಬೆಲೆ ಏರಿಕೆಯಿಂದ ಉಂಟಾಗಬಹುದಾದ ಭಾರೀ ಹೊರೆಗಳಿಂದ ಗ್ರಾಹಕರನ್ನು ರಕ್ಷಿಸಿದ್ದು E20 ಪೆಟ್ರೋಲ್. ಸಂಕಷ್ಟದ ಅವಧಿಯಲ್ಲಿ ಪ್ರತಿ ಲೀಟರ್ಗೆ ಸುಮಾರು 30 ರೂ.ವರೆಗೆ ಉಳಿತಾಯವಾಗಲು ಕಾರಣವಾಗಿದೆ ಎಂದು ಸರ್ಕಾರದ ಎಥೆನಾಲ್ ಮಿಶ್ರಣ ಕಾರ್ಯಕ್ರಮವನ್ನ ಸಚಿವಾಲಯ ಸಮರ್ಥಿಸಿಕೊಂಡಿದೆ.
ಇನ್ನು ಬಡವರಿಗಾಗಿ ಮೀಸಲಿಟ್ಟ ಆಹಾರ ಧಾನ್ಯಗಳನ್ನ ಎಥೆನಾಲ್ ಉತ್ಪಾದನೆಗೆ ಬಳಸಲಾಗುತ್ತಿದೆ ಅಥವಾ ಭಾರತೀಯ ಆಹಾರ ನಿಗಮ (FCI)ದ ಸಬ್ಸಿಡಿ ಅಕ್ಕಿಯನ್ನ ಈ ಯೋಜನೆಗೆ ತಿರುಗಿಸಲಾಗುತ್ತಿದೆ ಎಂಬ ಆರೋಪಗಳನ್ನು ಸಚಿವಾಲಯ ತಳ್ಳಿಹಾಕಿದೆ.