ನವದೆಹಲಿ, ಜು. 28 (DaijiworldNews/AA): ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ಅತ್ಯಾಚಾರಿಗಳ ರಕ್ಷಕ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಲೋಕಸಭೆಯ ಹೊರಗಡೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿಜೆಪಿಯು ಅತ್ಯಾಚಾರಿಗಳನ್ನು ಬೆಂಬಲಿಸುವ ವ್ಯಕ್ತಿಯನ್ನು ಈ ಹುದ್ದೆಯಲ್ಲಿ ತಂದುಕೂರಿಸಿದೆ. ಅತ್ಯಾಚಾರಿಗಳಿಗೆ ರಕ್ಷಣೆ ಬೇಕು ಎಂದು ಹೇಳುವವನಿಗಿಂತ ಕೆಟ್ಟ ವ್ಯಕ್ತಿ ಇನ್ನೊಬ್ಬನಿರಲು ಸಾಧ್ಯವಿಲ್ಲ. ಅಂತಹ ವ್ಯಕ್ತಿ ಇಂದು ಭಾರತದ ಶಿಕ್ಷಣ ಸಚಿವನಾಗಿದ್ದಾರೆ" ಎಂದು ಕಿಡಿಕಾರಿದ್ದಾರೆ.
"ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳು ಬಿಡುಗಡೆಯಾಗಿದ್ದನ್ನು ಸಮರ್ಥಿಸಿಕೊಂಡಿದ್ದ ಪ್ರಹ್ಲಾದ್ ಜೋಶಿ ಅವರಿಗೆ ಶಿಕ್ಷಣ ಇಲಾಖೆಯಂತಹ ಜವಾಬ್ದಾರಿಯುತ ಖಾತೆಯನ್ನು ನೀಡಬಾರದಿತ್ತು. ಅವರ ಸಚಿವಂಪುಟದಲ್ಲಿ ಎಷ್ಟೋ ಜನರಿದ್ದರು, ಅವರಲ್ಲಿ ಯಾರನ್ನಾದರೂ ಶಿಕ್ಷಣ ಸಚಿವರನ್ನಾಗಿ ಮಾಡಬಹುದಿತ್ತು. ಆದರೆ ಅತ್ಯಾಚಾರಿಗಳನ್ನು ರಕ್ಷಿಸುವ ವ್ಯಕ್ತಿಯನ್ನೇ ಪ್ರಧಾನಿ ಆಯ್ಕೆ ಮಾಡಿದ್ದಾರೆ" ಎಂದರು.