ನವದೆಹಲಿ, ಜು. 27 (DaijiworldNews/AK): ಕೇಂದ್ರ ಶಿಕ್ಷಣ ಸಚಿವಾಲಯದ ಚುಕ್ಕಾಣಿ ಹಿಡಿದಿರುವ ಪ್ರಲ್ಹಾದ್ ಜೋಶಿ ಅವರು ಆ ಖಾತೆಯನ್ನು ಸಮರ್ಥವಾಗಿ ನಿಭಾಯಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಡಾ.ರಾಧಾಮೋಹನ್ ದಾಸ್ ಅಗ್ರವಾಲ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಪ್ರಧಾನಿ ಮೋದಿಜೀ ಅವರು ಜೋಶಿಯವರ ಬಗ್ಗೆ ವಿಶ್ವಾಸದಿಂದ ಈ ಖಾತೆ ನೀಡಿದ್ದಾರೆ. ಪ್ರಲ್ಹಾದ್ ಜೋಶಿ ಅವರು ತಳಮಟ್ಟದ ನಾಯಕರು. ಸೇವಾ ಮನೋಭಾವ ಉಳ್ಳವರು ಎಂದು ತಿಳಿಸಿದ್ದಾರೆ.
ಕರ್ನಾಟಕದ ಉಸ್ತುವಾರಿ ಆಗಿರುವ ಕಾರಣ ಅಲ್ಲಿನ ಪಕ್ಷದ ರಾಜಕೀಯ ನೇತಾರರ ವಿಚಾರ ಗೊತ್ತಿದೆ. ಜೋಶಿ ಅವರು ನಿರಂತರವಾಗಿ ಸಂಸದರಾಗಿ ದೊಡ್ಡ ಅಂತರದಿಂದ ಗೆಲುವು ಸಾಧಿಸುತ್ತಿದ್ದಾರೆ; ಜನತೆ ಮತ್ತು ಕಾರ್ಯಕರ್ತರ ಜೊತೆ ನಿರಂತರ ಸಂಪರ್ಕ ಇಟ್ಟುಕೊಂಡಿದ್ದಾರೆ ಎಂದು ವಿವರಿಸಿದರು.
ಸಂಸದೀಯ ವ್ಯವಹಾರ, ಕಲ್ಲಿದ್ದಲು ಖಾತೆ ಸಚಿವ ಸೇರಿದಂತೆ ವಿವಿಧ ಖಾತೆಗಳನ್ನು ನಿಭಾಯಿಸಿದವರು. ಸಮತೋಲನದಿಂದ ಕೆಲಸ ಮಾಡುವವರು ಎಂದು ತಿಳಿಸಿದರು.