ತಮಿಳುನಾಡು, ಜು. 03 (DaijiworldNews/AA): ಯುಪಿಎಸ್ಸಿ ಪರೀಕ್ಷೆಯು ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲಿ ಒಂದಾಗಿದ್ದು, ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಷ್ಟಸಾಧ್ಯ. ಈ ಪರೀಕ್ಷೆಯನ್ನು ತಮ್ಮ ಮೂರನೇ ಪ್ರಯತ್ನದಲ್ಲಿ ಉತ್ತೀರ್ಣರಾದ ಡಾ. ಎ.ಆರ್. ರಾಜಾ ಮೊಹೈದಿನ್ ಅವರ ಯಶೋಗಾಥೆ ಇದು.

ತಮಿಳುನಾಡಿನ ಮುತ್ತಯ್ಯ ಮೆಡಿಕಲ್ ಕಾಲೇಜಿನಲ್ಲಿ ಮೊಹೈದಿನ್ ಅವರು ಎಂಬಿಬಿಎಸ್ ಪದವಿ ಪಡೆದರು. ಬಳಿಕ ಯುಪಿಎಸ್ಸಿ ಪರೀಕ್ಷೆ ಬರೆಯಲು ಅವರು ನಿರ್ಧರಿಸುತ್ತಾರೆ.
2023ರಲ್ಲಿ ದೆಹಲಿಗೆ ತೆರಳಿದ ಮೊಹೈದಿನ್ ಅವರು, ಯುಪಿಎಸ್ಸಿ ಪರೀಕ್ಷೆಯ ಸಿದ್ಧತೆಗಾಗಿ ಅಕಾಡೆಮಿಯೊಂದಕ್ಕೆ ಸೇರಿಕೊಂಡರು. ವೈದ್ಯಕೀಯ ವಿಜ್ಞಾನವನ್ನು ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡರು.
2023 ಮತ್ತು 2024ರಲ್ಲಿ ಸತತ ಎರಡು ಬಾರಿ ಯುಪಿಎಸ್ಸಿ ಪರೀಕ್ಷೆ ಬರೆದು ಉತ್ತೀರ್ಣರಾಗುವಲ್ಲಿ ಮೊಹೈದಿನ್ ವಿಫಲರಾದರು. ಧೃತಿಗೆಡದೆ 2025ರಲ್ಲಿ ಮೂರನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ಅವರು 7ನೇ ರ್ಯಾಂಕ್ ಪಡೆದು ಉತ್ತೀರ್ಣರಾಗುವಲ್ಲಿ ಯಶಸ್ವಿಯಾಗುತ್ತಾರೆ.