ನವದೆಹಲಿ, ಜೂ. 26 (DaijiworldNews/AK): ವಿದೇಶ ಪ್ರವಾಸ, ವಿದ್ಯಾಭ್ಯಾಸ , ಕೆಲಸಕ್ಕೆ ಪಾಸ್ಪೋರ್ಟ್ ಮಾಡಿಸೋರಿಗೆ ಕೇಂದ್ರ ಸರ್ಕಾರ ಶಾಕ್ ಕೊಟ್ಟಿದೆ. , ಜುಲೈ 1 ರಿಂದ ಪಾಸ್ಪೋರ್ಟ್ ಶುಲ್ಕ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ತ್ಕಾಲ್ ಯೋಜನೆ ಅಡಿಯಲ್ಲಿ ಪಾಸ್ಪೋರ್ಟ್ ಪಡೆಯುವ ಶುಲ್ಕವನ್ನು 5,000 ರೂ.ಗಳಿಗೆ ಹೆಚ್ಚಿಸಲಾಗಿದೆ ಸಾಮಾನ್ಯ ಸೇವೆ, ಮಕ್ಕಳ ಪಾಸ್ಪೋರ್ಟ್, ನವೀಕರಣ ಸೇರಿದಂತೆ ಎಲ್ಲಾ ಕೆಟಗರಿಯಲ್ಲೂ ದರ ಪರಿಷ್ಕರಣೆ ಮಾಡಲಾಗಿದೆ.

ಜುಲೈ 1 ರಿಂದ ಹೊಸ ಪಾಸ್ಪೋರ್ಟ್ ಶುಲ್ಕ ಜಾರಿ
ಕೇಂದ್ರ ಸರ್ಕಾರ 1980 ರ ಪಾಸ್ಪೋರ್ಟ್ ನಿಯಮಗಳಿಗೆ ತಿದ್ದುಪಡಿ ತಂದು ಹೊಸ ಶುಲ್ಕವನ್ನ ಪ್ರಕಟಿಸಿದೆ. ಅದರಂತೆ, ವಿದೇಶಾಂಗ ಸಚಿವಾಲಯ ಆದೇಶದ ಪ್ರಕಾರ, ಪರಿಷ್ಕೃತ ಶುಲ್ಕಗಳು ಜುಲೈ 1, 2026 ರಿಂದ ದೇಶಾದ್ಯಂತ ಅನ್ವಯವಾಗಲಿವೆ.
1967 ರ ಪಾಸ್ಪೋರ್ಟ್ ಕಾಯ್ದೆಯ ಸೆಕ್ಷನ್ 24 ರ ಅಡಿಯಲ್ಲಿ ಈ ಬದಲಾವಣೆ ಮಾಡಲಾಗಿದೆ. ಹೊಸ ನಿಯಮದಂತೆ 18 ವರ್ಷ ಮೇಲ್ಪಟ್ಟವರು ಹಾಗೂ 15 ರಿಂದ 18 ವರ್ಷದೊಳಗಿನವರು ಈ ವರ್ಗದಲ್ಲಿ ಅರ್ಜಿ ಸಲ್ಲಿಸಿದರೆ 36 ಪುಟಗಳ ಪಾಸ್ಪೋರ್ಟ್ಗೆ ಸಾಮಾನ್ಯ ಶುಲ್ಕ 2,500 ರೂಪಾಯಿ ಆಗಲಿದೆ. ತತ್ಕಾಲ್ ಸೇವೆಗೆ 5,000 ರೂಪಾಯಿ ನಿಗದಿಯಾಗಿದೆ. 60 ಪುಟಗಳ ಪಾಸ್ಪೋರ್ಟ್ ಬೇಕಾದರೆ ಸಾಮಾನ್ಯ ಅರ್ಜಿಗೆ 3,500 ರೂಪಾಯಿ ಮತ್ತು ತತ್ಕಾಲ್ ಅರ್ಜಿಗೆ ,5000 ರೂಪಾಯಿ ಪಾವತಿಸಬೇಕು.
ಪ್ರಸ್ತುತ 10 ವರ್ಷಗಳ ಮಾನ್ಯತೆ ಹೊಂದಿರುವ 36 ಪುಟಗಳ ಪಾಸ್ಪೋರ್ಟ್ಗೆ ಸಾಮಾನ್ಯ ಶುಲ್ಕ 1,500 ರೂಪಾಯಿ ಇದೆ. ತತ್ಕಾಲ್ ಹೆಚ್ಚುವರಿ ಶುಲ್ಕ 2,000 ರೂಪಾಯಿ. 60 ಪುಟಗಳ ಪಾಸ್ಪೋರ್ಟ್ಗೆ ಸಾಮಾನ್ಯ ಶುಲ್ಕ 2,000 ರೂಪಾಯಿ ಮತ್ತು ತತ್ಕಾಲ್ ಹೆಚ್ಚುವರಿ ಶುಲ್ಕ 2,000 ರೂಪಾಯಿ ಇದೆ. ಹೊಸ ದರದ ಪ್ರಕಾರ ಸಾಮಾನ್ಯ ವರ್ಗದಲ್ಲಿ 1,000 ರಿಂದ 1,500 ರೂಪಾಯಿ ಹಾಗೂ ತತ್ಕಾಲ್ನಲ್ಲಿ 1,000 ರಿಂದ 2,000 ರೂಪಾಯಿ ವರೆಗೆ ಏರಿಕೆಯಾಗಿದೆ.
ಏತನ್ಮಧ್ಯೆ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಪ್ರಾಪ್ತರಿಗೆ 5 ವರ್ಷ ಅಥವಾ 18 ವರ್ಷ ತುಂಬುವವರೆಗೆ ಮಾನ್ಯತೆ ಇರುವ 36 ಪುಟಗಳ ಪಾಸ್ಪೋರ್ಟ್ಗೆ ಶುಲ್ಕ 1,000 ರೂಪಾಯಿ. ತತ್ಕಾಲ್ಗೆ 2,000 ರೂಪಾಯಿ ಇರಲಿದೆ. ಕಳೆದುಹೋದ, ಹಾನಿಗೊಳಗಾದ ಅಥವಾ ಕಳುವಾದ ಪಾಸ್ಪೋರ್ಟ್ ಬದಲಿಗೆ 36 ಪುಟಕ್ಕೆ 3,000 ರೂಪಾಯಿ ಮತ್ತು 60 ಪುಟಕ್ಕೆ 3,500 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರ ಅಂದರೆ ಪಿಸಿಸಿಗೆ 500 ರೂಪಾಯಿ ನಿಗದಿಪಡಿಸಲಾಗಿದೆ. ಇಸಿಆರ್ ಅಳಿಸುವಿಕೆ ಅಥವಾ ವೈಯಕ್ತಿಕ ವಿವರ ಬದಲಾವಣೆಗೆ ಅಪ್ರಾಪ್ತರಿಗೂ 1,000 ರಿಂದ 2,000 ರೂಪಾಯಿ ವರೆಗೆ ಶುಲ್ಕವಿದೆ.