ಬೆಂಗಳೂರು, ಜೂ. 06 (DaijiworldNews/AK): ಕಾಂಗ್ರೆಸ್ ಹೈಕಮಾಂಡ್ ಮನವೊಲಿಕೆ ಬಳಿಕ ಸಚಿವ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ರಾಮಲಿಂಗಾರೆಡ್ಡಿ ಅವರು ವಾಪಸ್ ಪಡೆದುಕೊಂಡಿದ್ದಾರೆ.

ಹೊಸದಾಗಿ ರಚನೆಯಾದ ರಾಜ್ಯ ಸಚಿವ ಸಂಪುಟದಲ್ಲಿ ಖಾತೆಗಳ ಹಂಚಿಕೆ ಬಗ್ಗೆ ರೆಡ್ಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನಂತರ ಈ ಬೆಳವಣಿಗೆ ಸಂಭವಿಸಿದೆ. ಅವರಿಗೆ ಬೃಹತ್ ಮತ್ತು ಮಧ್ಯಮ ನೀರಾವರಿ ಖಾತೆಯನ್ನು ನೀಡಲಾಗಿತ್ತು, ಆದರೆ ಅವರು ಬೆಂಗಳೂರು ಅಭಿವೃದ್ಧಿ ಖಾತೆಯನ್ನು ನಿರೀಕ್ಷಿಸುತ್ತಿದ್ದರು ಎಂದು ವರದಿಯಾಗಿದೆ,
ಖಾಸಗಿ ಹೋಟೆಲ್ನಲ್ಲಿ ಸಿಎಂ ಡಿ.ಕೆ.ಶಿವಕುಮಾರ್, ರಾಮಲಿಂಗಾರೆಡ್ಡಿ, ಬಿ.ಕೆ.ಹರಿಪ್ರಸಾದ್ ಜೊತೆ ರಣದೀಪ್ ಸುರ್ಜೇವಾಲ ಇಂದು ಸಭೆ ನಡೆಸಿದರು. ಬೆಂಗಳೂರು ಅಭಿವೃದ್ಧಿ ಖಾತೆ ಕೊಡಲು ಸಾಧ್ಯವಿಲ್ಲ. ಇರುವ ಖಾತೆ ಜೊತೆಗೆ ಮತ್ತೊಂದು ಖಾತೆ ನೀಡಲಾಗುವುದು ಎಂದು ರೆಡ್ಡಿಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ
ನೀವು ಸಚಿವ ಸ್ಥಾನಕ್ಕೆ ನೀಡಿದ ರಾಜೀನಾಮೆ ವಾಪಾಸ್ ಪಡೆಯಿರಿ. ಈ ವಿಚಾರ ರಾಹುಲ್ ಗಾಂಧಿ ಜೊತೆ ಚರ್ಚೆ ನಡೆಸಿ ನಿಮಗೆ ತಿಳಿಸುತ್ತೇನೆ. ಹೈಕಮಾಂಡ್ ಹೇಳುವ ಖಾತೆಯಲ್ಲಿ ನೀವು ಮುಂದುವರಿಯಬೇಕಾಗುತ್ತದೆ ಎಂದು ತಿಳಿಸಿದರು. ಸುರ್ಜೇವಾಲ ಸೂಚನೆ ಮೇರೆಗೆ ರಾಮಲಿಂಗಾರೆಡ್ಡಿ ರಾಜೀನಾಮೆ ಹಿಂಪಡೆದಿದ್ದಾರೆ.