ನವದೆಹಲಿ, ಮೇ. 21 (DaijiworldNews/AA): ದೇಶಾದ್ಯಂತ ಎಲ್ಲಾ ಹೈಕೋರ್ಟ್ಗಳು ಆನ್ಲೈನ್ನಲ್ಲಿ ವಿಚಾರಣೆ ನಡೆಸುವಂತೆ ಕೇಳಿಕೊಳ್ಳಲಾಗಿದ್ದು, ಬಹುತೇಕ ಎಲ್ಲರೂ ಈಗಾಗಲೇ ಅದನ್ನು ಜಾರಿಗೆ ತಂದಿದ್ದಾರೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಸೂರ್ಯ ಕಾಂತ್ ತಿಳಿಸಿದ್ದಾರೆ.

ಪಶ್ಚಿಮ ಏಷ್ಯಾ ಸಂಘರ್ಷದಿಂದ ದೇಶದಲ್ಲಿ ತೈಲ ಬಿಕ್ಕಟ್ಟು ಎದುರಾಗಿದ್ದು, ಇಂಧನ ಉಳಿತಾಯ ಮಾಡಲು ಮನೆಯಿಂದ ಕೆಲಸ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ ಬೆನ್ನಲ್ಲೇ, "ನಾನು ಈಗಾಗಲೇ ಎಲ್ಲಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ವಿನಂತಿಸಿದ್ದೇನೆ. ಹೆಚ್ಚಿನವರು ಈಗಾಗಲೇ ಜಾರಿಗೆ ತಂದಿದ್ದಾರೆ. ಇದು ಬಾರ್ ಮತ್ತು ಬೆಂಚ್ ಎರಡೂ ಸ್ವಯಂಪ್ರೇರಿತ ನಿರ್ಧಾರವಾಗಿರಬೇಕು" ಎಂದು ಅವರು ಹೇಳಿದ್ದಾರೆ.
"ಜಿಲ್ಲಾ ನ್ಯಾಯಾಲಯಗಳು ಹೈಕೋರ್ಟ್ಗಳ ವ್ಯಾಪ್ತಿಗೆ ಬರುತ್ತವೆ. ಜಿಲ್ಲಾ ನ್ಯಾಯಾಲಯಗಳು ಹೈಕೋರ್ಟ್ಗಳ ಆಡಳಿತಾತ್ಮಕ ಕ್ಷೇತ್ರದಲ್ಲಿವೆ. ಅವರು ನಿರ್ಧಾರ ತೆಗೆದುಕೊಳ್ಳಲಿ. ಜಿಲ್ಲಾ ನ್ಯಾಯಾಲಯಗಳಿಗೂ ನಾನು ವಿನಂತಿಸಿದ್ದೇನೆ" ಎಂದರು.