ನವದೆಹಲಿ, ಮೇ. 19 (DaijiworldNews/AA): ಶೀಘ್ರದಲ್ಲೇ ದೇಶಕ್ಕೆ ದೊಡ್ಡ ಆರ್ಥಿಕ ಆಘಾತ ಎದುರಾಗಲಿದೆ. ಆದರೆ ಅದಾನಿ, ಅಂಬಾನಿ ಅಥವಾ ಮೋದಿಗೆ ಅದು ಎಫೆಕ್ಟ್ ಆಗುವುದಿಲ್ಲ, ಬದಲಾಗಿ ಯುವಕರು, ಕಾರ್ಮಿಕರು ಮತ್ತು ಸಣ್ಣ ವ್ಯಾಪಾರಿಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ತಿಳಿಸಿದ್ದಾರೆ.

ಇಂದು ರಾಯ್ಬರೇಲಿಯಲ್ಲಿ ಸುದ್ದಿಗಾರರೊಂದಿಗೆ ಅವರು, "ಮುಂದೆ ತುಂಬಾ ಕಠಿಣಾತಿಕಠಿಣ ದಿನಗಳು ಬರುತ್ತಿವೆ. ಹಲವು ವರ್ಷಗಳಿಂದ ನಾವು ನೋಡಿರದ ದೊಡ್ಡ ಆರ್ಥಿಕ ಆಘಾತ ಎದುರಾಗಲಿದೆ" ಎಂದರು.
"ಪ್ರಧಾನಿ ಮೋದಿ ಅವರು ತಾವೇ ಹೇಳಿದ ಕಠಿಣ ಕ್ರಮಗಳ ಕರೆಯನ್ನು ಅವರೇ ಪಾಲಿಸುತ್ತಿಲ್ಲ. ನರೇಂದ್ರ ಮೋದಿ ಅವರು ದೇಶದ ಜನತೆಗೆ ವಿದೇಶ ಪ್ರವಾಸ ಹೋಗಬೇಡಿ ಎಂದು ಹೇಳುತ್ತಿದ್ದಾರೆ. ಆದರೆ ಅವರೇ ಪ್ರಪಂಚದಾದ್ಯಂತ ಸುತ್ತುತ್ತಿದ್ದಾರೆ. ಇದು ನಮ್ಮ ಪ್ರಧಾನಿಯವರ ನಡೆ" ಎಂದು ವಾಗ್ದಾಳಿ ನಡೆಸಿದರು.