ಭರತ್ಪುರ, ಮೇ. 16 (DaijiworldNews/AA): ಯುಪಿಎಸ್ಸಿ ಪರೀಕ್ಷೆಯನ್ನು ಐಎಎಸ್, ಐಪಿಎಸ್ ಮತ್ತು ಐಎಫ್ಎಸ್ ನಂತಹ ಉನ್ನತ ಸರ್ಕಾರಿ ಸೇವೆಗಳಿಗೆ ಅಧಿಕಾರಿಗಳನ್ನು ನೇಮಿಸಿಕೊಳ್ಳಲು ನಡೆಸಲಾಗುತ್ತದೆ. 2024ರ ಯುಪಿಎಸ್ಸಿ ಪರೀಕ್ಷೆಯಲ್ಲಿ 104ನೇ ರ್ಯಾಂಕ್ ಪಡೆದು ಐಪಿಎಸ್ ಅಧಿಕಾರಿಯಾಗಿ ತರಬೇತಿ ಪಡೆಯುತ್ತಿರುವ ನಿಖಿಲ್ ಶರ್ಮಾ ಅವರ ಯಶೋಗಾಥೆ ಇದು.

ನಿಖಿಲ್ ಶರ್ಮಾ ಅವರು ಭರತ್ಪುರದ ಬಯಾನಾ ತಹಸಿಲ್ನ ಕಲ್ಸಾದಾ ಗ್ರಾಮದ ನಿವಾಸಿ. ಅವರ ತಂದೆ ಗೋಪಾಲ್ ಶರ್ಮಾ ನಿವೃತ್ತ ಶಿಕ್ಷಕರಾಗಿದ್ದರೆ, ಹಿರಿಯ ಸಹೋದರ ನರೇಂದ್ರ ಶರ್ಮಾ ಬ್ಯಾಂಕೊಂದರಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ನಿಖಿಲ್ ತಮ್ಮ ಆರಂಭಿಕ ಶಿಕ್ಷಣವನ್ನು ಕೋಟಾದಲ್ಲಿ ಪೂರ್ಣಗೊಳಿಸಿದರು. ಅಲ್ಲಿ 12ನೇ ತರಗತಿ ತೇರ್ಗಡೆಯಾದ ನಂತರ ಬಯಾಲಜಿಯಲ್ಲಿ ಬಿಎಸ್ಸಿ ಪದವಿ ಪಡೆದರು. ಯುಪಿಎಸ್ಸಿ ಬರೆಯುವುದು ಅವರ ಬಾಲ್ಯದ ಕನಸಾಗಿತ್ತು, ಹೀಗಾಗಿ ಅವರು ತಮ್ಮ ಯುಪಿಎಸ್ಸಿ ತಯಾರಿಯ ಮೇಲಷ್ಟೇ ಗಮನ ಹರಿಸಿದ್ದರು.
ನಿಖಿಲ್ ಅವರು ಯುಪಿಎಸ್ಸಿಗೆ ಸಸ್ಯಶಾಸ್ತ್ರ ವನ್ನು ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡಿದ್ದರು. ಮೊದಲ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ನಿಖಿಲ್ ಶರ್ಮಾ ಅವರು 252ನೇ ರ್ಯಾಂಕ್ ಪಡೆದು ಐಪಿಎಸ್ಗೆ ಆಯ್ಕೆಯಾಗಿದ್ದರು. 2024 ರಲ್ಲಿ ಎರಡನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ಅವರು 104ನೇ ರ್ಯಾಂಕ್ ಪಡೆಯುವ ಮೂಲಕ ಐಪಿಎಸ್ ಗೆ ಆಯ್ಕೆಯಾಗುತ್ತಾರೆ.
ನಿಖಿಲ್ ಶರ್ಮಾ ಸದ್ಯ ಹೈದರಾಬಾದ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ಐಪಿಎಸ್ ಅಧಿಕಾರಿಯಾಗಿ ತರಬೇತಿ ಪಡೆಯುತ್ತಿರುವಾಗಲೇ ಅವರು ಮತ್ತೊಮ್ಮ ಯುಪಿಎಸ್ಸಿ ಪರೀಕ್ಷೆ ಬರೆದು ಉತ್ತಮ ರ್ಯಾಂಕ್ ಗಳಿಸಿದ್ದಾರೆ. ಕೇವಲ 23ನೇ ವಯಸ್ಸಿಗೆ ಈ ಸಾಧನೆ ಮಾಡುವ ಮೂಲಕ ನಿಖಿಲ್ ಶರ್ಮಾ ಅವರು ಅನೇಕ ಅಭ್ಯರ್ಥಿಗಳಿಗೆ ಮಾದರಿಯಾಗಿದ್ದಾರೆ.