ನವದೆಹಲಿ, ಮೇ. 15 (DaijiworldNews/AA): ಶುಕ್ರವಾರ ತೈಲ ಬೆಲೆಗಳು ಬ್ಯಾರೆಲ್ಗೆ 110 ಡಾಲರ್ಗೆ ತಲುಪಿದ ಕಾರಣ ಭಾರತದ ರೂಪಾಯಿ ಮೌಲ್ಯವು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ಡಾಲರ್ ಎದುರು 96.14 ರೂ. ತಲುಪಿದೆ.

ಶುಕ್ರವಾರ ಅಂತರಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 95.86ಕ್ಕೆ ಆರಂಭವಾಯಿತು. ದಿನದ ವಹಿವಾಟಿನ ಅಂತ್ಯಕ್ಕೆ ದಾಖಲೆಯ ಕನಿಷ್ಠ ಮಟ್ಟವಾದ 96.14 ರೂ.ಗೆ ಇಳಿದು ಹಿಂದಿನ ವಹಿವಾಟಿಗಿಂತಲೂ 50 ಪೈಸೆ ಕುಸಿಯಿತು.
ನಿರಂತರ ಬಂಡವಾಳದ ಹೊರಹರಿವು ಮತ್ತು ಇರಾನ್ ಯುದ್ಧದಿಂದ ಇಂಧನ ಬೆಲೆ ಹೆಚ್ಚುತ್ತಿರುವುದು ರೂಪಾಯಿ ಮೌಲ್ಯ ಕುಸಿತ ಕಂಡಿದೆ. ಈ ಹಿನ್ನೆಲೆ ಜಾಗತಿಕ ಹಣದುಬ್ಬರದ ಬಗ್ಗೆ ಕಳವಳ ಹೆಚ್ಚಾಗಿದೆ.