ಬೆಂಗಳೂರು, ಮೇ. 15 (DaijiworldNews/AA): ಪೆಟ್ರೋಲ್, ಡಿಸೇಲ್ ದರ ಏರಿಕೆ ಬೆನ್ನಲ್ಲೇ ಖಾಸಗಿ ಬಸ್ ಟಿಕೆಟ್ ದರ ಹೆಚ್ಚಳ ಮಾಡಲಾಗಿದ್ದು, ಈ ಪರಿಷ್ಕೃತ ದರ ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ.

ಈ ಕುರಿತು ಮಾಹಿತಿ ನೀಡಿರುವ ಕರ್ನಾಟಕ ರಾಜ್ಯ ಖಾಸಗಿ ಬಸ್ ಮಾಲೀಕರ ಸಂಘ, '20ರಿಂದ 30% ದರ ಏರಿಕೆ ಮಾಡಲಾಗಿದ್ದು, ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ. ಪ್ರತಿದಿನ ಖಾಸಗಿ ಬಸ್ ಮಾಲೀಕರು ಕನಿಷ್ಠ 150 ಲೀಟರ್ ಆಯಿಲ್ ಹಾಕಿಸಿಕೊಳ್ಳಬೇಕು. ನಮಗೆ ಪ್ರತಿ ಟ್ರಿಪ್ಗೆ ಹೆಚ್ಚುವರಿಯಾಗಿ 450 ರೂ. ಅಂದರೆ ಹೊರೆ ಆಗಲಿದೆ. ಹೀಗಾಗಿ ಅನಿವಾರ್ಯವಾಗಿ ದರ ಏರಿಕೆ ಮಾಡುತ್ತಿದ್ದೇವೆ. ಇದರ ಪರಿಣಾಮ ಪ್ರಯಾಣಿಕರ ಮೇಲೆ ಬೀಳಲಿದೆ' ಎಂದು ತಿಳಿಸಿದೆ.
"ಸ್ಕೂಲ್ ವಾಹನಗಳ ದರ 10% ವರೆಗೆ ಏರಿಕೆ ಮಾಡಿದ್ದಾಗಿ ತಿಳಿಸಿದ್ದಾರೆ. ಇದರ ಜೊತೆಗೆ ರಾಜ್ಯ ಟ್ರ್ಯಾವೆಲ್ ಪಾಸೆಂಜರ್ ವಾಹನಗಳ ದರವೂ 10%-15%ನಷ್ಟು ಏರಿಕೆಯಾಗಲಿದೆ" ಎಂದು ಕರ್ನಾಟಕ ರಾಜ್ಯ ಖಾಸಗಿ ಶಾಲಾ ವಾಹನಗಳ ಯುನಿಯನ್ ಅಧ್ಯಕ್ಷ ರವಿಕುಮಾರ್ ತಿಳಿಸಿದ್ದಾರೆ.