ಆಂಧ್ರಪ್ರದೇಶ ,ಮೇ. 15 (DaijiworldNews/AK): ಐಎಎಸ್ ಅಧಿಕಾರಿ ರಾಳ್ಳಪಲ್ಲಿ ಜಗತ್ ಸಾಯಿ ಅವರ ಸ್ಪೂರ್ತಿದಾಯಕ ಕಥೆ ತಿಳಿಯೋಣ ಬನ್ನಿ.

4 ಬಾರಿ UPSC ಪರೀಕ್ಷೆಯಲ್ಲಿ ಅನುತ್ತೀರ್ಣರಾದ ರಾಳ್ಳಪಲ್ಲಿ ಜಗತ್ ಸಾಯಿ ಸೋಲನ್ನೇ ಗೆಲುವಿನ ಮೆಟ್ಟಿಲು ಮಾಡಿಕೊಳ್ಳಲು ಕಲಿತವರು. ಛಲ ಬಿಡದೇ ತಮ್ಮ ಐದನೇ ಪ್ರಯತ್ನದಲ್ಲಿ ಯುಪಿಎಸ್ ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಅಖಿಲ ಭಾರತ 32ನೇ ರ್ಯಾಂಕ್ ಪಡೆದರು.
ರಾಳಪಲ್ಲಿ ಜಗತ್ ಸಾಯಿ ಅವರು ನಾಗರಿಕ ಸೇವಾ ಪರೀಕ್ಷೆಯಲ್ಲಿ ಸಂದರ್ಶನದಲ್ಲಿ 200 ಅಂಕಗಳು ಮತ್ತು ಲಿಖಿತ ಪರೀಕ್ಷೆಯಲ್ಲಿ 804 ಅಂಕಗಳು ಸೇರಿದಂತೆ ಒಟ್ಟು 1004 ಅಂಕಗಳನ್ನು ಪಡೆದಿದ್ದಾರೆ. ಎರಡನೇ ಪ್ರಯತ್ನದಲ್ಲಿ, ಅವರು ಸಂದರ್ಶನದ ಸುತ್ತನ್ನು ತಲುಪಿದರು, ಆದರೆ ಉತ್ತೀರ್ಣರಾಗಲು ಸಾಧ್ಯವಾಗಲಿಲ್ಲ. ಪರೀಕ್ಷೆಯ ಅಂತಿಮ ಹಂತಕ್ಕೆ ಬಂದರೂ ಹಿನ್ನಡೆ ಕಂಡಿದ್ದು ಅವರಿಗೆ ತೀವ್ರ ನಿರಾಸೆ ಮೂಡಿಸಿತು.
ಮೊದಲ ಸಲ ಪರೀಕ್ಷೆಯಲ್ಲಿ ವಿಫಲರಾದ ಬಳಿಕ ಸಾಯಿ ದೆಹಲಿಯಲ್ಲಿ ಕೋಚಿಂಗ್ ಸೆಂಟರ್ ಗೆ ಸೇರಿದರು. ಆಂಧ್ರಪ್ರದೇಶದ ಗುಂಡುಗೋಳನು ಗ್ರಾಮದಿಂದ ಬಂದ ಸಾಯಿ ಅವರಿಗೆ ರಾಷ್ಟ್ರ ರಾಜಧಾನಿಯಲ್ಲಿ ವಾಸಿಸುವುದು ಕಷ್ಟಕರವಾಗಿತ್ತು. ಸಾಯಿ ಅವರ ಕುಟುಂಬ ಆಂಧ್ರಪ್ರದೇಶದಲ್ಲಿ ನೆಲೆಸಿದೆ. ಸಾಯಿ ಅವರ ತಂದೆ ವಿದ್ಯುತ್ ವಿತರಣಾ ಕಂಪನಿಯಲ್ಲಿ ಸಹಾಯಕ ಎಂಜಿನಿಯರ್, ತಾಯಿ ಗೃಹಿಣಿ. ಅವರ ಕಿರಿಯ ಸಹೋದರ ಕೂಡ ನಾಗರಿಕ ಸೇವೆಗೆ ತಯಾರಿ ನಡೆಸುತ್ತಿದ್ದಾರೆ. ಸಾಯಿ ಅವರು ವೆಲ್ಲೂರ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ನಲ್ಲಿ ಬಿ.ಟೆಕ್ ಪದವಿಯನ್ನು ಪಡೆದಿದ್ದಾರೆ.
ಮೂರನೇ ಪ್ರಯತ್ನದಲ್ಲಿ ವಿಫಲರಾದರು. ಅವರ ನಾಲ್ಕನೇ ಬಾರಿಗೆ ಅವರು ಮತ್ತೊಮ್ಮೆ ಸಂದರ್ಶನದಲ್ಲಿ ಕಾಣಿಸಿಕೊಂಡರು. ಆದರೆ ಕೆಲವು ಅಂಕಗಳಿಂದ ವಿಫಲ ಕಾಣಬೇಕಾಯಿತು. ಅಂತಿಮವಾಗಿ, ಅವರು ಐದನೇ ಮತ್ತು ಕೊನೆಯ ಪ್ರಯತ್ನದಲ್ಲಿ ಯಶಸ್ಸನ್ನು ಪಡೆದರು.