ಮುಂಬೈ, ಮೇ. 14 (DaijiworldNews/AK): ಇಂಧನ ಬಳಕೆ ಕಡಿಮೆ ಮಾಡಲು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಸಚಿವ ಆಶಿಶ್ ಶೆಲಾರ್ ಅವರು ಕಾರು ಬಿಟ್ಟು ರಾಯಲ್ ಎನ್ಫೀಲ್ಡ್ ಬುಲೆಟ್ 350ನಲ್ಲಿ ವಿಧಾನ ಭವನಕ್ಕೆ ಬಂದಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇರಾನ್ ಹಾಗೂ ಅಮೇರಿಕ ನಡುವಿನ ಉದ್ವಿಘ್ನತೆ ಹೆಚ್ಚುತ್ತಿರುವ ಹಿನ್ನೆಲೆ ಮಧ್ಯಪ್ರಾಚ್ಯದಲ್ಲಿ ತೈಲ ಬಿಕ್ಕಟ್ಟು ತೀವ್ರಗೊಳ್ಳುತ್ತಿದೆ. ಇದರಿಂದ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಗೆ ಕೆಲವು ಮಿತವ್ಯಯ ಕ್ರಮಗಳನ್ನು ಅನುಸರಿಸಲು ಕರೆ ಕೊಟ್ಟಿದ್ದರು. ಈ ಕರೆಗೆ ಇದೀಗ ಬಿಜೆಪಿ ನಾಯಕರಿಂದ ಅಭಿಯಾನ ಆರಂಭವಾಗಿದೆ.
ಮೋದಿ ಕರೆ ಬೆನ್ನಲ್ಲೇ ಇಂಧನ ಉಳಿತಾಯಕ್ಕೆ ಮಹಾರಾಷ್ಟ್ರ ಸರ್ಕಾರದ ಎಲ್ಲಾ ಸಚಿವರ ಬೆಂಗಾವಲು ವಾಹನಗಳ ಸಂಖ್ಯೆಯನ್ನು 50% ರಷ್ಟು ಕಡಿಮೆ ಮಾಡುವಂತೆ ಫಡ್ನವೀಸ್ ಹೇಳಿದ್ದರು. ಮೇ 14ರಂದು ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗುವ ಸಮಗ್ರ ಇಂಧನ ಉಳಿತಾಯ ಯೋಜನೆ ಸಿದ್ಧಪಡಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಅವರು ತಿಳಿಸಿದ್ದರು.
ಈ ನಿರ್ದೇಶನದ ಹಿಂದಿನ ಉದ್ದೇಶ ಎಲ್ಲಾ ಇಲಾಖೆಗಳು ವಿದ್ಯುತ್ ವಾಹನ ಬಳಕೆಯನ್ನು ವಿಸ್ತರಿಸುವುದು, ಪ್ರಯಾಣ ವೆಚ್ಚವನ್ನು ಕಡಿಮೆ ಮಾಡುವುದಾಗಿದೆ. ಅಲ್ಲದೇ ಆನ್ಲೈನ್ ಸಭೆಗಳನ್ನು ನಡೆಸುವುದು, ಅನಗತ್ಯ ಅಂತಾರಾಷ್ಟ್ರೀಯ ಪ್ರಯಾಣವನ್ನು ರದ್ದುಗೊಳಿಸುವುದು ಅಥವಾ ಮುಂದೂಡುವುದಾಗಿದೆ. ಈ ಕ್ರಮಗಳ ಭಾಗವಾಗಿ ಅಧಿಕಾರಿಗಳು ಸ್ಥಳೀಯ ರೈಲುಗಳು ಮತ್ತು ಬಸ್ಗಳಂತಹ ಸಾರ್ವಜನಿಕ ಸಾರಿಗೆಯನ್ನು ಬಳಸಬೇಕು. ಇದು ಸರ್ಕಾರದ ಇಂಧನ ವೆಚ್ಚವನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ.
.