ಉತ್ತರ ಪ್ರದೇಶ, ಮೇ. 13 (DaijiworldNews/AA): ಯುಪಿಎಸ್ಸಿ ಪರೀಕ್ಷೆಯನ್ನು ಐಎಎಸ್, ಐಪಿಎಸ್ ಮತ್ತು ಐಎಫ್ಎಸ್ ನಂತಹ ಉನ್ನತ ಸರ್ಕಾರಿ ಸೇವೆಗಳಿಗೆ ಅಧಿಕಾರಿಗಳನ್ನು ನೇಮಿಸಿಕೊಳ್ಳಲು ನಡೆಸಲಾಗುತ್ತದೆ. 2024ರ ಯುಪಿಎಸ್ಸಿ ಪರೀಕ್ಷೆಯಲ್ಲಿ 130ನೇ ರ್ಯಾಂಕ್ ಪಡೆದ ಅಭಿನವ್ ಶರ್ಮಾ ಅವರ ಯಶೋಗಾಥೆ ಇದು.

ಅಭಿನವ್ ಅವರ ತಂದೆ ರಮೇಶ್ ಚಂದ್ರ ಶರ್ಮಾ ಅವರು ಪ್ರಸ್ತುತ ಮೀರತ್ನ ದೆಹಲಿ ಗೇಟ್ ಪೊಲೀಸ್ ಠಾಣೆಯಲ್ಲಿ ಸ್ಟೇಷನ್ ಹೌಸ್ ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಪೊಲೀಸ್ ಇಲಾಖೆಗೆ ಕಾನ್ಸ್ಟೇಬಲ್ ಆಗಿ ಸೇರಿದ್ದರು, ನಂತರ ಸಬ್ ಇನ್ಸ್ಪೆಕ್ಟರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಪ್ರಸ್ತುತ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅಭಿನವ್ ಅವರು 2020 ರಲ್ಲಿ ಪಾಟ್ನಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇಂದ ಸಿವಿಲ್ ಇಂಜಿನಿಯರಿಂಗ್ನಲ್ಲಿ ಬಿ.ಟೆಕ್ ಪೂರ್ಣಗೊಳಿಸಿದರು. ಆ ಸಮಯದಲ್ಲಿ ಯಾವುದೇ ಕೆಲಸಕ್ಕೆ ಸೇರದೆ ಯುಪಿಎಸ್ಸಿ ಪರೀಕ್ಷೆಗಾಗಿ ತಯಾರಿ ನಡೆಸಿದರು.
2021ರಲ್ಲಿ ಮೊದಲ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ಅಭಿನವ್ ಉತ್ತೀರ್ಣರಾಗಲು ಸಾಧಿವಾಗಲಿಲ್ಲ. ಬಳಿಕ 2022ರಲ್ಲಿ ಎರಡನೇ ಬಾರಿಗೆ ಪರೀಕ್ಷೆ ಬರೆದ ಅವರು ಉತ್ತೀರ್ಣರಾಗುವಲ್ಲಿ ವಿಫಲರಾಗುತ್ತಾರೆ. 2023 ರಲ್ಲಿ ಮೂರನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ಅವರು ಭಾರತೀಯ ಅಂಚೆ ಸೇವೆ ಲಭಿಸಿತು. ಆದರೆ ಐಪಿಎಸ್ ಅಧಿಕಾರಿಯಾಗಬೇಕೆಂಬ ಅವರ ಕನಸಿಗಾಗಿ ಸೇವೆಯಿಂದ ರಜೆ ಪಡೆದು ಮತ್ತೆ ಪರೀಕ್ಷೆಗೆ ಸಿದ್ಧತೆ ನಡೆಸಿದರು.
ಸತತ ಸೋಲಿನಿಂದ ಕಂಗೆಡದೆ 2024ರಲ್ಲಿ ನಾಲ್ಕನೇ ಬಾರಿಗೆ ಅಭಿನವ್ ಯುಪಿಎಸ್ಸಿ ಪರೀಕ್ಷೆ ಬರೆಯುತ್ತಾರೆ. ಈ ಬಾರಿ ಅವರು 131ನೇ ಅಖಿಲ ಭಾರತ ರ್ಯಾಂಕ್ ಪಡೆದು ಐಪಿಎಸ್ ಅಧಿಕಾರಿಯಾಗುವಲ್ಲಿ ಸಫಲರಾಗುತ್ತಾರೆ.