ಚೆನ್ನೈ, ಮೇ. 11 (DaijiworldNews/AK): ತಮಿಳುನಾಡಿನ ನೂತನ ಮುಖ್ಯಮಂತ್ರಿ ವಿಜಯ್ ಅವರು ಮಾಜಿ ಸಿಎಂ ಎಂ.ಕೆ.ಸ್ಟಾಲಿನ್ ಅವರನ್ನು ಭೇಟಿಯಾಗಿದ್ದಾರೆ. ಇದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಪರಸ್ಪರರು ಕೈಮುಗಿದು ಕುಶಲೋಪರಿ ವಿಚಾರಿಸಿಕೊಂಡಿದ್ದಾರೆ. ಈ ವೇಳೆ ಉದಯನಿಧಿ ಸ್ಟಾಲಿನ್ ಕೂಡ ಇದ್ದರು.

ಏಪ್ರಿಲ್ 23ರ ಚುನಾವಣೆಗೆ ಮುಂಚಿತವಾಗಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮತ್ತು ಡಿಎಂಕೆ ತೀವ್ರ ಚುನಾವಣಾ ಸ್ಪರ್ಧೆಯಲ್ಲಿ ತೊಡಗಿತ್ತು. ವಿಜಯ್ ಕೂಡ ಡಿಎಂಕೆ ವಿರುದ್ಧ ಸಾಕಷ್ಟು ವಾಗ್ದಾಳಿ ನಡೆಸಿದ್ದರು. ನಿನ್ನೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವಾಗಲೂ ಸಿಎಂ ವಿಜಯ್ ಡಿಎಂಕೆ ಸರ್ಕಾರ ಭಾರೀ ಸಾಲ ಮಾಡಿ ಹೋಗಿದೆ ಎಂದು ಆರೋಪಿಸಿದ್ದರು. ಇದಕ್ಕೆ ಸ್ಟಾಲಿನ್ ಕೂಡ ತಿರುಗೇಟು ನೀಡಿದ್ದರು. ಅದರ ಬೆನ್ನಲ್ಲೇ ಇಬ್ಬರೂ ನಾಯಕರು ಮುಖಾಮುಖಿ ಭೇಟಿಯಾಗಿದ್ದಾರೆ.
ಕಾಂಗ್ರೆಸ್ ಮತ್ತು ಇತರ ಪಕ್ಷಗಳ ಸಹಾಯದಿಂದ ವಿಜಯ್ ಹೊಸ ಸರ್ಕಾರವನ್ನು ರಚಿಸುವಲ್ಲಿ ಯಶಸ್ವಿಯಾದರು. ಭಾನುವಾರ ರಾಜ್ಯದ 9ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.