ಚೆನ್ನೈ, ಮೇ. 10 (DaijiworldNews/AA): ತಮಿಳುನಾಡು ಸಿಎಂ ಆಗಿ ತಮಿಳಗ ವೆಟ್ರಿ ಕಳಗಂ ಸ್ಥಾಪಕ ಮತ್ತು ಅಧ್ಯಕ್ಷ ಸಿ. ಜೋಸೇಫ್ ವಿಜಯ್ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ, ವಿಧಾನಸಭೆಯ ವಿಪಕ್ಷ ನಾಯಕನ ಸ್ಥಾನಕ್ಕೆ ಮಾಜಿ ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಆಯ್ಕೆಯಾಗಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಡಿಎಂಕೆ, ಉದಯನಿಧಿ ಸ್ಟಾಲಿನ್ ಪ್ರತಿಪಕ್ಷ ನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರ ನೇತೃತ್ವದಲ್ಲಿ ಮೇ 7ರಂದು ಚೆನ್ನೈನಲ್ಲಿರುವ ಪಕ್ಷದ ಮುಖ್ಯ ಕಚೇರಿ ಅಣ್ಣಾ ಅರಿವಾಲಯಂನಲ್ಲಿ ನಡೆದ ಪಕ್ಷದ ಶಾಸಕರ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಕೆ.ಎನ್. ನೆಹರು ಅವರನ್ನು ಪ್ರತಿಪಕ್ಷ ಉಪ ನಾಯಕ ಮತ್ತು ಇ.ವಿ. ವೇಲು ಅವರನ್ನು ಪಕ್ಷದ ವಿಪ್ ಆಗಿ ಆಯ್ಕೆ ಮಾಡಲಾಗಿದೆ ಎಂದು ಡಿಎಂಕೆ ಮಾಹಿತಿ ನೀಡಿದೆ.