ಬೆಂಗಳೂರು, ಮೇ. 06 (DaijiworldNews/AK): ಹಿರಿಯ ಐಪಿಎಸ್ ಅಧಿಕಾರಿ ಡಾ. ಕೆ.ರಾಮಚಂದ್ರ ರಾವ್ ಅಮಾನತು ಆದೇಶವನ್ನ ರಾಜ್ಯ ಸರ್ಕಾರ ಹಿಂಪಡೆದಿದೆ.

ಐಜಿಪಿಯಾಗಿದ್ದಾಗ ಕಚೇರಿಯಲ್ಲೇ ಪೊಲೀಸ್ ಸಮವಸ್ತ್ರದಲ್ಲಿರುವಾಗಲೇ ಮಹಿಳೆಯರ ಜೊತೆ ರಾಸಲೀಲೆ ನಡೆಸಿದ ವಿಡಿಯೋ ವೈರಲ್ ಆಗಿ ರಾಜ್ಯ ಸರ್ಕಾರ ರಾಮಚಂದ್ರ ರಾವ್ರನ್ನ ಅಮಾನತು ಮಾಡಿತ್ತು. ಇದೀಗ ಅಮಾನತು ಆದೇಶವನ್ನ ವಾಪಸ್ ಪಡೆದಿದೆ.
ಡಿಜಿಪಿ ಪೊಲೀಸ್ ಮ್ಯಾನ್ಯುವಲ್ ಅಂತಾ ಹೊಸ ಹುದ್ದೆ ಸೃಷ್ಟಿಸಿ ನಿಯೋಜನೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಇದೇ ತಿಂಗಳು 31 ರಂದು ಡಿಜಿಪಿ ರಾಮಚಂದ್ರ ರಾವ್ ಸೇವಾ ನಿವೃತ್ತಿ ಹೊಂದಲಿದ್ದಾರೆ. ಹೀಗಾಗಿ, ಅಮಾನತು ಆದೇಶವನ್ನ ವಾಪಸ್ ಪಡೆಯಲಾಗಿದೆ. ಈಗಾಗಲೇ ರಾಸಲೀಲೆ ಪ್ರಕರಣದಲ್ಲಿ ಸರ್ಕಾರಕ್ಕೆ ಪೊಲೀಸರು ತನಿಖಾ ವರದಿ ಸಲ್ಲಿಸಿದ್ದಾರೆ.