ಚೆನ್ನೈ, ಮೇ. 05 (DaijiworldNews/AA): ತಮಿಳುನಾಡಿನ ಚುನಾವಣೆಯಲ್ಲಿ ತಿರುಪ್ಪತ್ತೂರು ವಿಧಾನಸಭಾ ಕ್ಷೇತ್ರದ ಟಿವಿಕೆ ಅಭ್ಯರ್ಥಿ ಶ್ರೀನಿವಾಸ ಸೇತುಪತಿ ಅವರು ರಾಜ್ಯ ಸಹಕಾರ ಸಚಿವ ಕೆ.ಆರ್. ಪೆರಿಯಕರುಪ್ಪನ್ ಅವರನ್ನು ಕೇವಲ ಒಂದು ಮತದ ಅಂತರದಿಂದ ಸೋಲಿಸಿದ್ದಾರೆ.

ತಿರುಪ್ಪತ್ತೂರು ಕ್ಷೇತ್ರದಲ್ಲಿ ಡಿಎಂಕೆ 8 ಬಾರಿ ಜಯಗಳಿಸಿತ್ತು. ಹೀಗಾಗಿ ಈ ಕ್ಷೇತ್ರವನ್ನು ಡಿಎಂಕೆಯ ಭದ್ರಕೋಟೆ ಎಂದು ಹೇಳಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಫರ್ಧಿಸಿರುವ ಟಿವಿಕೆ ಪಕ್ಷವು ಡಿಎಂಕೆಯ ಭದ್ರಕೋಟೆಯನ್ನು ಉರುಳಿಸಿದೆ.
ಮತ ಎಣಿಕೆಯ ಆರಂಭದಿಂದಲೂ ಪೆರಿಯಕರುಪ್ಪನ್ ಮತ್ತು ಸೀನಿವಾಸ ಸೇತುಪತಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಮೊದಲ ಮೂರು ಸುತ್ತುಗಳು ಪೂರ್ಣಗೊಳ್ಳುವವರೆಗೆ ಡಿಎಂಕೆ ಅಭ್ಯರ್ಥಿ ಪೆರಿಯಕರುಪ್ಪನ್ 10,533 ಮತಗಳನ್ನು ಪಡೆದಿದ್ದರು. ಟಿವಿಕೆ ಅಭ್ಯರ್ಥಿ ಶ್ರೀನಿವಾಸ ಸೇತುಪತಿ 8,861 ಮತಗಳೊಂದಿಗೆ 2ನೇ ಸ್ಥಾನದಲ್ಲಿದ್ದರು.
30ನೇ ಸುತ್ತಿನ ಕೊನೆಯಲ್ಲಿ ಪೆರಿಯಕರುಪ್ಪನ್ 83,374 ಮತಗಳನ್ನು ಪಡೆದರೆ, ಶ್ರೀನಿವಾಸ ಸೇತುಪತಿ 83,375 ಮತಗಳನ್ನು ಗಳಿಸಿದರು. ಮರು ಎಣಿಕೆಯ ನಂತರವೂ ಫಲಿತಾಂಶದಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ. ಹೀಗಾಗಿ ಶ್ರೀನಿವಾಸ ಸೇತುಪತಿ ಅವರನ್ನು ಅಂತಿಮವಾಗಿ ವಿಜೇತರೆಂದು ಘೋಷಿಸಲಾಯಿತು.