ಬೆಂಗಳೂರು, ಮೇ. 05 (DaijiworldNews/AA): ವಾಣಿಜ್ಯ ಎಲ್ಪಿಜಿ ಸಿಲಿಂಡರ್ ದರದಲ್ಲಿ ಭಾರಿ ಏರಿಕೆಯಾದ ಬೆನ್ನಲ್ಲೇ, ಬೆಂಗಳೂರಿನ ಹೋಟೆಲ್ ಮಾಲೀಕರು ತಿಂಡಿ, ಊಟ ಹಾಗೂ ಕಾಫಿ-ಟೀ ದರಗಳನ್ನು ಶೇ. 20ರಷ್ಟು ಹೆಚ್ಚಿಸಲು ಮುಂದಾಗಿದೆ.

ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 993 ರೂ. ಏರಿಕೆಯಾಗಿದ್ದು, 19 ಕೆಜಿ ತೂಕದ ಸಿಲಿಂಡರ್ ದರ ಈಗ 3,154 ರೂ. ತಲುಪಿದೆ. ಸಿಲಿಂಡರ್ ಬೆಲೆ ಏರಿಕೆ ಹಿನ್ನೆಲೆ ನಷ್ಟವನ್ನು ಸರಿದೂಗಿಸಲು ಹೋಟೆಲ್ ಮಾಲೀಕರು ಆಹಾರ ಪದಾರ್ಥಗಳ ಬೆಲೆ ಶೇ. 20ರಷ್ಟು ಹೆಚ್ಚಿಸಲು ಚಿಂತನೆ ನಡೆಸಿದ್ದಾರೆ.
ಇನ್ನು ಬೆಂಗಳೂರಿನ ಗಾಂಧಿನಗರದ ಪ್ರಮುಖ ಹೋಟೆಲ್ ಒಂದರಲ್ಲಿ ಈಗಾಗಲೇ ದರ ಏರಿಕೆ ಜಾರಿಗೆ ಬಂದಿದೆ. ಊಟ- 100 ರೂ. ನಿಂದ 120 ರೂ. ಗೆ, ದೋಸೆ- 75 ರೂ. ನಿಂದ 85 ರೂ. ಗೆ, ಪೂರಿ- 60 ರೂ. ನಿಂದ 75 ರೂ. ಗೆ, ಟೀ- 20 ರೂ. ನಿಂದ 25 ರೂ. ಗೆ ಏರಿಕೆಯಾಗಿದೆ.