ನವದೆಹಲಿ, ಮೇ. 03 (DaijiworldNews/AA): ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟಿನ ನಡುವೆ ಸುಮಾರು 45,000 ಟನ್ ಎಲ್ಪಿಜಿಯನ್ನು ಹೊತ್ತ ಭಾರತದ 'ಸರ್ವಶಕ್ತಿ' ಹಡಗು ಜಲಸಂಧಿಯನ್ನು ದಾಟುವಲ್ಲಿ ಯಶಸ್ವಿಯಾಗಿದೆ.

ಮಾರ್ಷಲ್ ದ್ವೀಪಗಳ ಧ್ವಜ ಹೊತ್ತ 'ಸರ್ವಶಕ್ತಿ' ಹಡಗು ಸುಮಾರು 45,000 ಟನ್ ಎಲ್ಪಿಜಿಯನ್ನು ಹೊತ್ತು ಸಾಗಿದೆ. ಶನಿವಾರ ಇರಾನ್ನ ಲಾರಾಕ್ ಮತ್ತು ಕೆಶ್ಮ್ ದ್ವೀಪಗಳನ್ನು ದಾಟಿ ಒಮಾನ್ ಕೊಲ್ಲಿಗೆ ಸಾಗಿದಂತೆ ಕಂಡುಬಂದಿದೆ ಎಂದು ಹಡಗು ಟ್ರ್ಯಾಕಿಂಗ್ ದತ್ತಾಂಶಗಳು ಮಾಹಿತಿ ನೀಡಿದೆ.
ಕಳೆದ ತಿಂಗಳು ಅಸ್ತವ್ಯಸ್ತವಾಗಿದ್ದ ಹಾರ್ಮುಜ್ ಜಲಸಂಧಿಯನ್ನು ತಾತ್ಕಾಲಿಕವಾಗಿ ತೆರೆದು ಮತ್ತೆ ಮುಚ್ಚಲಾಗಿದೆ. ಈ ಅವಧಿಯಲ್ಲಿ ಹಲವು ಹಡಗುಗಳು ಮಾರ್ಗವನ್ನು ದಾಟಿವೆ. ಅದರಲ್ಲಿ ಭಾರತ 'ಸರ್ವಶಕ್ತಿ' ಹಡಗು ಕೂಡ ಒಂದು.
ಈ ಬೃಹತ್ ಹಡಗು ಈ ಹಿಂದೆಯೂ ಪರ್ಷಿಯನ್ ಕೊಲ್ಲಿ ಮತ್ತು ಭಾರತೀಯ ಬಂದರುಗಳ ನಡುವೆ ಸಂಚಾರ ನಡೆಸಿತ್ತು. ಇರಾನ್ ಯುದ್ಧ ಪ್ರಾರಂಭವಾದಾಗಿನಿಂದ ಹಡಗುಗಳು ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಿವೆ.