ಬೆಂಗಳೂರು, ಮೇ. 02 (DaijiworldNews/AA): ಮೂರು ವರ್ಷದ ಹಿಂದೆ ಕಳುವಾಗಿದ್ದ ಬೈಕ್ಗೆ ದಂಡ ಕಟ್ಟುವಂತೆ ಮಾಲೀಕನಿಗೆ ಪೊಲೀಸರು ನೋಟಿಸ್ ನೀಡಿರುವ ಘಟನೆ ವರದಿಯಾಗಿದೆ.

ದೂರುದಾರ ಟೆಕ್ಕಿ ಅಭಿಷೇಕ್ ಕುಮಾರ್ ಝಾ ಬೆಂಗಳೂರಿನಿಂದ ಬಿಹಾರಕ್ಕೆ ಸ್ಥಳಾಂತರಗೊಂಡಿದ್ದರು. ಈ ವೇಳೆ ತನ್ನ ಸುಜುಕಿ ಸ್ವಿಚ್ ಬೈಕ್ನ ಲಾಜಿಸ್ಟಿಕ್ಸ್ ಸೇವೆಗೆ ಒಪ್ಪಿಸಿದ್ದರು. ಆದರೆ, ಅದು ನಿಗದಿ ಜಾಗಕ್ಕೆ ತಲುಪಿರಲಿಲ್ಲ. ನಂತರ ಎಷ್ಟೇ ಹುಡುಕಾಟ ನಡೆಸಿದ್ರೂ ಬೈಕ್ ಪತ್ತೆಯಾಗಿರಲಿಲ್ಲ. ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಆದರೆ, ಮೂರು ವರ್ಷದ ಹಿಂದೆ ಕಳುವಾಗಿದ್ದ ಬೈಕ್ಗೆ ಕಳೆದ ವಾರ ದಂಡ ಕಟ್ಟುವಂತೆ ಬೈಕ್ ಮಾಲೀಕನಿಗೆ ನೋಟಿಸ್ ಬಂದಿದೆ. ಪರಿಶೀಲನೆ ನಡೆಸಿದ ವೇಳೆ ವ್ಯಕ್ತಿಯೊಬ್ಬ ತ್ರಿಬಲ್ ರೈಡಿಂಗ್ ಮಾಡಿದ್ದು, ಹಿಂಬದಿ ಸವಾರರಿಗೆ ಹೆಲ್ಮೆಟ್ ಇಲ್ಲದೇ ಬೈಕ್ ಓಡಿಸಿದ್ದಾನೆ.
ಸದ್ಯ ಟೆಕ್ಕಿ ಅಭಿಷೇಕ್ ಕುಮಾರ್ ಝಾ ಕಳುವಾದ ಸಂಬಂಧ ದಾಖಲೆ ತೆಗೆದುಕೊಂಡು ಬರುವಂತೆ ಪೊಲೀಸರು ತಿಳಿಸಿದ್ದಾರೆ.