ಹಾವೇರಿ, ಮೇ. 01(DaijiworldNews/AK): ಅಧಿಕಾರ ಮತ್ತು ಆದರ್ಶದ ನಡುವೆ ಯಾವಾಗಲೂ ಸಂಘರ್ಷ ಇರುತ್ತದೆ. ಆದರೆ, ಅಧಿಕಾರ ಬಂದಾಗಲೂ ಕೂಡ ಆದರ್ಶಗಳನ್ನು ಬಿಡದೇ ಅಧಿಕಾರವನ್ನು ಆದರ್ಶದ ಪಾಲನೆಗೆ ಉಪಯೋಗ ಮಾಡಿಕೊಂಡವರು ಧೀಮಂತ ನಾಯಕರಾಗುತ್ತಾರೆ. ಅವರು ಯಡಿಯೂರಪ್ಪನವರು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಇಂದು ಹಾವೇರಿಯ ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಕಾರ್ಯಾಲಯದಲ್ಲಿ ಇದೇ ಮೇ 9 ರಂದು ಚಿತ್ರದುರ್ಗದಲ್ಲಿ ನಡೆಯುವ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಅಭಿಮಾನೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು..
ನನ್ನ ನೆಚ್ಚಿನ ನಾಯಕರ ಅಭಿಮಾನೋತ್ಸವ ಹುಟ್ಟಿದಾಗ ಯಾರೂ ನಾಯಕರಾಗುವುದಿಲ್ಲ. ಹುಟ್ಟಿದಾಗ ಕಣ್ಣು ತೆಗೆಯಲು ಬರುವುದಿಲ್ಲ. ಅವರೇಗೆ ನಾಯಕರಾಗುತ್ತಾರೆ. ತಮ್ಮ ಕಠಿಣ ಪರಿಶ್ರಮದಿಂದ ಗುರಿ ಸಾಧನೆಯ ಛಲದಿಂದ ನಿರಂತರವಾಗಿ ಜನರ ಜೊತೆಗೆ ಇದ್ದು, ಪರಿಶ್ರಮದ ನಾಯಕರು ಯಾರದರೂ ಇದ್ದರೆ ಅದು ಕರ್ನಾಟಕದ ರಾಜಾ ಹುಲಿ ಯಡಿಯೂರಪ್ಪ ಅವರು ಎಂದರು.