ಕೋಲ್ಕತ್ತಾ, ಏ. 27 (DaijiworldNews/AK): ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನಕ್ಕೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಬರಾಕ್ಪೋರ್ನಲ್ಲಿ ಬಿಜೆಪಿಯ ಬಲ ಪ್ರದರ್ಶನ ಮಾಡಿದರು.

ತಮ್ಮ ಭಾಷಣದ ಉದ್ದಕ್ಕೂ ವಿಜಯದ ಆತ್ಮವಿಶ್ವಾಸವನ್ನು ಪ್ರದರ್ಶಿಸಿದ ಅವರು, ಮುಂದಿನ ಬಾರಿ ಬರುವುದು ಬಿಜೆಪಿಯ ಪ್ರಮಾಣವಚನ ಸಮಾರಂಭಕ್ಕೆ ಎಂದು ಘೋಷಿಸುವ ಮೂಲಕ ರಾಜಕೀಯ ಸಂಚಲನ ಮೂಡಿಸಿದರು.
ಈ ಚುನಾವಣೆಯಲ್ಲಿ ಇದು ನನ್ನ ಕೊನೆಯ ರ್ಯಾಲಿ ಮೇ 4ರ ಫಲಿತಾಂಶದ ನಂತರ ಖಂಡಿತವಾಗಿಯೂ ಬಿಜೆಪಿಯ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಲು ನಾನು ಹಿಂತಿರುಗುತ್ತಿದ್ದೇನೆ ಎಂಬ ವಿಶ್ವಾಸ ನನಗಿದೆ, ಎಂದು ಮೋದಿ ಹೇಳಿದರು.
ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿರುದ್ಧ ಪ್ರಧಾನಿ ಕಿಡಿಕಾರಿದರು. ಬಂಗಾಳದ ಅಭಿವೃದ್ಧಿಗೆ ಟಿಎಂಸಿ ಬಳಿ ಯಾವುದೇ ಮಾರ್ಗಸೂಚಿ ಇಲ್ಲ. ರಾಜ್ಯಕ್ಕೆ ಈಗ ಡಬಲ್-ಎಂಜಿನ್ ಸರ್ಕಾರದ ಅಗತ್ಯವಿದೆ ಎಂದು ಅವರು ಹೇಳಿದರು.