ಕೋಲ್ಕತ್ತಾ, ಏ. 27 (DaijiworldNews/AA): ಮುಂದಿನ ಬಾರಿ ಬಿಜೆಪಿಯ ಪ್ರಮಾಣವಚನ ಸಮಾರಂಭಕ್ಕೆ ಬರುತ್ತೇನೆ ಎಂದು ಹೇಳುವ ಮೂಲಕ ಬಂಗಾಳದಲ್ಲಿ ಬಿಜೆಪಿಯ ವಿಜಯದ ಆತ್ಮವಿಶ್ವಾಸವನ್ನು ಪ್ರದರ್ಶಿಸಿದರು.

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನಕ್ಕೆ ಮುನ್ನ ಬರಾಕ್ಪೋರ್ನಲ್ಲಿ ನಡೆದ ರ್ಯಾಲಿಯಲ್ಲಿ ಭಾಷಣ ಮಾಡಿದ ಅವರು, "ಈ ಚುನಾವಣೆಯಲ್ಲಿ ಇದು ನನ್ನ ಕೊನೆಯ ರ್ಯಾಲಿ, ಮೇ 4ರ ಫಲಿತಾಂಶದ ನಂತರ ಖಂಡಿತವಾಗಿಯೂ ಬಿಜೆಪಿಯ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಲು ನಾನು ಹಿಂತಿರುಗುತ್ತಿದ್ದೇನೆ ಎಂಬ ವಿಶ್ವಾಸ ನನಗಿದೆ, ಎಂದು ಮೋದಿ ಹೇಳಿದರು. ಬೆಳಗ್ಗೆಯಿಂದಲೇ ಕಿಲೋಮೀಟರ್ಗಳಷ್ಟು ಉದ್ದಕ್ಕೂ ಸಾಲುಗಟ್ಟಿ ನಿಂತಿದ್ದ ಜನಸ್ತೋಮವನ್ನು ಕಂಡು ಅವರು ಭಾವುಕರಾದರು ಮತ್ತು ಜನರ ಈ ಆಶೀರ್ವಾದವೇ ನನ್ನ ಉತ್ಸಾಹಕ್ಕೆ ಕಾರಣ" ಎಂದು ಹೇಳಿದರು.
"ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿರುದ್ಧ ಪ್ರಧಾನಿ ಕಿಡಿಕಾರಿದರು. ಬಂಗಾಳದ ಅಭಿವೃದ್ಧಿಗೆ ಟಿಎಂಸಿ ಬಳಿ ಯಾವುದೇ ಮಾರ್ಗಸೂಚಿ ಇಲ್ಲ. ರಾಜ್ಯಕ್ಕೆ ಈಗ ಡಬಲ್-ಎಂಜಿನ್ ಸರ್ಕಾರದ ಅಗತ್ಯವಿದೆ" ಎಂದರು.