ಹುಬ್ಬಳ್ಳಿ, ಏ. 14 (DaijiworldNews/AK): ದೇಶದ ಪ್ರತಿಷ್ಠಿತ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್ಸಿ ಪರೀಕ್ಷೆಯಲ್ಲಿ ಯಾವುದೇ ಕೋಚಿಂಗ್ ಸಹಾಯವಿಲ್ಲದೇ ಸ್ವಂತ ಪರಿಶ್ರಮದಿಂದಲೇ ಹುಬ್ಬಳ್ಳಿಯ ಯುವತಿಯೊಬ್ಬ ರ್ಯಾಂಕ್ ಪಡೆಯುವ ಮೂಲಕ ಬಹುದೊಡ್ಡ ಸಾಧನೆಯನ್ನು ಮಾಡಿದ್ದಾರೆ. ಹುಬ್ಬಳ್ಳಿಯ ಅಭಯ ಜೈನ್ ಹಾಗೂ ಇಂದಿರಾ ಜೈನ್ ಅವರ ಪುತ್ರಿ ಕೃಪಾ ಎ ಜೈನ್ಎಂಬುವವರೇ ಯು.ಪಿ.ಎಸ್.ಸಿಯಲ್ಲಿ 440 ನೇ ರ್ಯಾಂಕ್ ಪಡೆದ ಸಾಧಕಿ.

ಕಿರಾಣಿ ವರ್ತಕರ ಮಗಳಾದ ಕೃಪಾ ಜೈನ್ ಓದಿರುವುದು ಇಂಜಿನಿಯರಿಂಗ್ (Engineering) ಆಗಿದ್ದರೂ ಸಿವಿಲ್ ಸರ್ವೀಸ್ (Civil Service) ಮಾಡಬೇಕು ಎಂಬುವಂತ ಮಹದಾಸೆಯಲ್ಲಿಯೇ ಸತತ ಪರಿಶ್ರಮದಿಂದ ತಾವು ಕಂಡ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಓದುವುದನ್ನೇ ಫ್ಯಾಷನ್ ಆಗಿಸಿಕೊಂಡ ಯುವತಿ ಈಗ ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ 440ನೇ ರ್ಯಾಂಕ್ ಪಡೆಯುವ ಮೂಲಕ ಹುಬ್ಬಳ್ಳಿಯ ಕೀರ್ತಿಯನ್ನು ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿದ್ದಾರೆ.
ಇನ್ನೂ ಬೆಂಗಳೂರಿನಲ್ಲಿ ಆರ್.ವಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಓದಿ ಬೆಂಗಳೂರಿನ ಸಿಸ್ಕೋ ಕಂಪನಿಯಲ್ಲಿ ಕೆಲಸ ನಿರ್ವಹಿಸಿ 2020ರಲ್ಲಿ ಯು.ಪಿ.ಎಸ್.ಸಿ (UPSC) ಮಾಡಲೇಬೇಕು ಎಂದು ಛಲತೊಟ್ಟು ದೆಹಲಿಗೆ ತೆರಳಿ ಯಾವುದೇ ಕೋಚಿಂಗ್ ಇಲ್ಲದೆಯೇ ಸ್ವಂತ ಪರಿಶ್ರಮ, ನಿರಂತರ ಪ್ರಯತ್ನದ ಮೂಲಕ ಈಗ ಮಹತ್ವದ ಸಾಧನೆ ಮಾಡಿದ್ದಾರೆ.
ಕಳೆದ ವರ್ಷ ಯು ಪಿ ಎಸ್ ಸಿಯಲ್ಲಿ ರೈಲ್ವೆ ಜಾಬ್ ಆಗಿದ್ದರೂ ಕೂಡ ಮರಳಿ ಯತ್ನ ಮಾಡಿ ಈಗ 440ನೇ ರ್ಯಾಂಕ್ ಪಡೆದಿದ್ದಾರೆ. ಯುವತಿಯ ಸಾಧನೆಗೆ ಹೆತ್ತವರು ಹಾಗೂ ಕುಟುಂಬಸ್ಥರು ಖುಷಿಯನ್ನು ಹಂಚಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಆರ್.ವಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಓದಿ ಬೆಂಗಳೂರಿನ ಸಿಸ್ಕೋ ಕಂಪನಿಯಲ್ಲಿ ಕೆಲಸ ನಿರ್ವಹಿಸಿದ್ದ ಕೃಪಾ ಎ ಜೈನ್ 2020ರಲ್ಲಿ ಯು.ಪಿ.ಎಸ್.ಸಿ ಮಾಡಲೇಬೇಕು ಎಂದು ಛಲತೊಟ್ಟು ದೆಹಲಿಗೆ ತೆರಳಿ ಯಾವುದೇ ಕೋಚಿಂಗ್ ಇಲ್ಲದೆಯೇ ಸ್ವಂತ ಪರಿಶ್ರಮ, ನಿರಂತರ ಪ್ರಯತ್ನದ ಮೂಲಕ ಮಹತ್ವದ ಸಾಧನೆ ಮಾಡಿದ್ದಾರೆ.