ಬೆಂಗಳೂರು, ಏ. 01 (DaijiworldNews/AA): ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸತತವಾಗಿ ಏರಿಕೆ ಕಂಡಿದೆ. ಇದೀಗ ಇಂದು ಮತ್ತೆ 200 ರೂ. ಏರಿಕೆಯಾಗಿದ್ದು, ಆಭರಣ ಪ್ರಿಯರಿಗೆ ಶಾಕ್ ಉಂಟಾಗಿದೆ.

ಮಂಗಳವಾರ ಗ್ರಾಮ್ಗೆ 185 ರೂ ಹೆಚ್ಚಿದ್ದ ಚಿನ್ನದ ಬೆಲೆ ಇಂದು 200 ರೂ. ಏರಿಕೆಯಾಗಿದೆ. ಈ ಮೂಲಕ ಎರಡು ದಿನದಲ್ಲಿ ಬಹುತೇಕ 400 ರೂಗಳಷ್ಟು ಹೆಚ್ಚಳವಾಗಿದೆ.
ಇಂದು ಚಿನ್ನದ ದರ ಪ್ರತಿ ಗ್ರಾಂಗೆ 200 ರೂ. ಏರಿಕೆ ಕಂಡಿದೆ. 24 ಕ್ಯಾರೆಟ್ನ ಅಪರಂಜಿ ಚಿನ್ನ 10 ಗ್ರಾಂಗೆ 1,51,480 ರೂ. ತಲುಪಿದ್ದು, 1 ಗ್ರಾಂಗೆ 15,148 ರೂ. ತಲುಪಿದೆ. 22 ಕ್ಯಾರೆಟ್ನ ಚಿನ್ನ 10 ಗ್ರಾಂಗೆ 1,38,850 ರೂ. ತಲುಪಿದ್ದು, 1 ಗ್ರಾಂಗೆ 13,885 ರೂ. ತಲುಪಿದೆ. ಇನ್ನು 18 ಕ್ಯಾರಟ್ನ 1 ಗ್ರಾಂಗೆ 11,361 ರೂ. ತಲುಪಿದೆ.
ಗ್ರಾಂಗೆ 255 ರೂ. ರೂಪಾಯಿ ಏರಿಕೆ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,500 ರೂಪಾಯಿ ಇದೆ.