ಬೆಂಗಳೂರು, ಮಾ. 30 (DaijiworldNews/AA): ಗ್ಯಾಸ್ ಸಮಸ್ಯೆಗೆ ಪ್ರಧಾನಿ ಮೋದಿ ಮತ್ತು ಕೇಂದ್ರ ಪೆಟ್ರೋಲಿಯಂ ಸಚಿವರು ಉತ್ತರಿಸಬೇಕು. ಶೀಘ್ರವೇ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಅವರು ತಿಳಿಸಿದ್ದಾರೆ.

ಹೋಟೆಲ್ಗಳಲ್ಲಿ ಸಿಲಿಂಡರ್ ಸಮಸ್ಯೆ ಆಗುತ್ತಿರುವ ವಿಚಾರವಾಗಿ ಮಾತನಾಡಿದ ಅವರು, "ನಿನ್ನೆ ಹೆಚ್ಚುವರಿ ಸಿಲಿಂಡರ್ಗೆ ಕೇಂದ್ರ ಸರ್ಕಾರ ಆದೇಶ ಮಾಡಿದೆ. ಸಿಲಿಂಡರ್ ಇವತ್ತು ಡಿಸ್ಟ್ರಿಬ್ಯೂಟರ್ಗೆ ಹೋಗುತ್ತದೆ. ನಾಳೆ ಎಲ್ಲರಿಗೂ ಸಿಗಲಿದೆ. ನಾವು ಹೇಳಿದಂತೆ 17,500 ಸಿಲಿಂಡರ್ ಹೋಟೆಲ್ ಅವರಿಗೆ ಸಿಗುತ್ತದೆ. ಹೋಟೆಲ್ ಅವರಿಗೆ ನಾಳೆ ಡೆಲಿವರಿ ಆಗುತ್ತದೆ. ಯಾರು ಭಯ ಬೀಳೋ ಅವಶ್ಯಕತೆ ಇಲ್ಲ" ಎಂದು ಹೇಳಿದರು.
"ಕೇಂದ್ರ ಸರ್ಕಾರಕ್ಕೆ ಮನವಿ ಮಾಡ್ತೀನಿ. ಸಿಲಿಂಡರ್ ಸಮಸ್ಯೆ ಬಗ್ಗೆ ಕೇಂದ್ರ ಅಡ್ರೆಸ್ ಮಾಡಬೇಕು. ಕೇಂದ್ರ ಸರ್ಕಾರ ಹಿಂದೆ ಗ್ಯಾಸ್ ಕೊಡ್ತೀವಿ. ಎಷ್ಟು ಬೇಕಾದ್ರು ಕರ್ಮಷಿಯಲ್ ಗ್ಯಾಸ್ ಉಪಯೋಗ ಮಾಡಿಕೊಳ್ಳಿ ಅಂದಿದ್ದರು. ಈಗ ದಿಢೀರ್ ಅಂತ ನಿಲ್ಲಿಸಿರೋದು ಸಮಸ್ಯೆ ಆಗಿದೆ. ಈಗ ಕೇಂದ್ರವೇ ಸಮಸ್ಯೆ ಬಗ್ಗೆ ಮಾತಾಡಬೇಕು. ಮೋದಿ ಮತ್ತು ಪೆಟ್ರೋಲಿಯಂ ಸಚಿವರು ಮಾತಾಡಬೇಕು. ಪರ್ಯಾಯ ವ್ಯವಸ್ಥೆ ಮಾಡಬೇಕು. ಗ್ಯಾಸ್ ಸಮಸ್ಯೆ ಆಗಿದೆ. ಜನರು ಆಹಾಕಾರಗೊಂಡಿದ್ದಾರೆ. ಇದಕ್ಕೆ ಪರಿಹಾರ ಕೊಡಬೇಕಾಗಿರೋದು ಕೇಂದ್ರ, ಅವರು ಮಾತಾಡಬೇಕು" ಎಂದು ಆಗ್ರಹಿಸಿದ್ದಾರೆ.