ಚೆನ್ನೈ, ಮಾ. 22 (DaijiworldNews/AA): ತಮ್ಮ ರಾಜಕೀಯ ಸಿದ್ಧಾಂತವನ್ನ ಒಪ್ಪಿಕೊಳ್ಳುವವರೊಂದಿಗೆ ಮಾತ್ರವೇ ಹೊಂದಾಣಿಕೆ ಎಂಬುದನ್ನ ಪುನರುಚ್ಚರಿಸಿರುವ ತಮಿಳಗ ವೆಟ್ರಿ ಕಳಗಂ ಮುಖಸ್ಥ ಹಾಗೂ ನಟ ವಿಜಯ್ ಎಐಎಡಿಎಂಕೆ ಹಾಗೂ ಬಿಜೆಪಿ ಜೊತೆ ಮೈತ್ರಿ ಸಾಧ್ಯತೆಯ ಬಗ್ಗೆ ಹರಿದಾಡುತ್ತಿರುವ ವದಂತಿಗಳನ್ನ ತಳ್ಳಿ ಹಾಕಿದ್ದಾರೆ.

ಪಕ್ಷದ ವತಿಯಿಂದ ಮಾಮಲ್ಲಪುರಂನ ಪಂಚತಾರಾ ಹೋಟೆಲ್ನಲ್ಲಿ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ವಿಜಯ್ ಮಾತಾಡಿದ ಅವರು, "ತಮ್ಮ ಜಾತ್ಯತೀತ ಅಸ್ಮಿತೆಯೊಂದಿಗೆ ಎಂದಿಗೂ ರಾಜೀ ಮಾಡಿಕೊಳ್ಳುವುದಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಕಣಕ್ಕಿಳಿಯುತ್ತೇವೆ. ನಮ್ಮ ರಾಜಕೀಯ ಸಿದ್ಧಾಂತವನ್ನ ಒಪ್ಪಿಕೊಳ್ಳುವವರೊಂದಿಗೆ ಮಾತ್ರವೇ ಹೊಂದಾಣಿಕೆ ಇರಲಿದೆ" ಎಂದು ಹೇಲಿದರು.
"ನಾವು ಪಕ್ಷವನ್ನು ಆರಂಭಿಸಿದ ಹೊಸತರಲ್ಲಿ ನಮ್ಮ ಎದುರಾಳಿಗಳು ನಮ್ಮನ್ನ ಆ ತಂಡದ ಭಾಗವಾಗಿದ್ದೀವಿ. ಈ ತಂಡದ ಭಾಗವಾಗಿದ್ದೀವಿ ಎಂದು ಬ್ರ್ಯಾಂಡ್ ಮಾಡಲು ಪ್ರಯತ್ನಿಸಿದ್ದರು. ಯಾವಾಗ ವಿಜಯ್ ಜೊತೆಗಿರುವ ಜನರ ಬಳಗವನ್ನ ನೋಡಿದರೋ, ಆಗ ಅವರೊಂದಿಗೆ ಮೈತ್ರಿ ಮಾಡಿಕೊಳ್ಳಬಹುದು. ಇವರೊಂದಿಗೆ ಕೈಜೋಡಿಸಬಹುದು ಎಂಬಂತಹ ಸುದ್ದಿಗಳನ್ನು ಹರಡಲಾರಂಭಿಸಿದರು" ಎಂದರು.