ನವದೆಹಲಿ, ಮಾ. 20 (DaijiworldNews/AK): ದೆಹಲಿ ವಿಮಾನ ನಿಲ್ದಾಣದಿಂದ ಕೆನಡಾದ ವ್ಯಾಂಕೂವರ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಗುರುವಾರ ಸುಮಾರು ನಾಲ್ಕು ಗಂಟೆಗಳ ಕಾಲ ಹಾರಾಟ ನಡೆಸಿ ನಂತರ ವಾಪಸ್ ದೆಹಲಿಗೆ ಮರಳಿದ ಘಟನೆ ನಡೆದಿದೆ.

ಚೀನಾದ ವಾಯುಪ್ರದೇಶವನ್ನು ತಲುಪಿದ್ದ ವಿಮಾನವನ್ನು ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಿಂತಿರುಗಲು ಆದೇಶಿಸಲಾಯಿತು ಏಕೆಂದರೆ ವಿಮಾನಯಾನ ಸಂಸ್ಥೆಯು ಕೆನಡಾವನ್ನು ಪ್ರವೇಶಿಸಲು ಅನುಮತಿ ಪಡೆಯದ ವಿಮಾನ ಆವೃತ್ತಿಯನ್ನು ನಿಯೋಜಿಸಿತ್ತು.
ಗುರುವಾರ ಬೆಳಿಗ್ಗೆ 11:34 ಕ್ಕೆ ದೆಹಲಿಯಿಂದ AI 185 ವಿಮಾನ ಹೊರಟಿಸಿತ್ತು. ಏರ್ ಇಂಡಿಯಾ ತನ್ನ ಬೋಯಿಂಗ್ 777-337 (ER) ಬಳಸಲಾಗುತ್ತಿತ್ತು, ಆದರೆ ಅಂದು ಬೋಯಿಂಗ್ 777-200 LR ವಿಮಾನವನ್ನು ಬಳಸಲಾಗಿತ್ತು. ಮೂಲಗಳ ಪ್ರಕಾರ ಬಳಸಲಾದ ವಿಮಾನದ ಬಗ್ಗೆ ಕೆಲವು ಆಡಳಿತಾತ್ಮಕ ಅಥವಾ ತಾಂತ್ರಿಕ ಅನುಮತಿಗಳ ಸಮಸ್ಯೆಯಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ. ಸದ್ಯ ವಿಮಾನವು ದೆಹಲಿಯಲ್ಲಿ ಸುರಕ್ಷಿತವಾಗಿ ಇಳಿದಿದ್ದು, ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ವಿಮಾನಯಾನ ಸಂಸ್ಥೆಯು ಇದನ್ನು ಕಾರ್ಯಚರಣೆಯ ಸಮಸ್ಯೆ ಎಂದು ಕರೆದಿದೆ.
ಈ ಕುರಿತು ಅಧಿಕೃತ ಪ್ರಕಟಣೆ ಹಒರಡಿಸಿರುವ ಏರ್ ಇಂಡಿಯಾ, ಪ್ರಮಾಣಿತ ಕಾರ್ಯಾಚರಣೆಯ ಕಾರ್ಯವಿಧಾನಗಳ ಅನ್ವಯ ಸುರಕ್ಷತೆಯ ದೃಷ್ಟಿಯಿಂದ ವಿಮಾನವನ್ನು ವಾಪಸ್ ಕರೆಸಿಕೊಳ್ಳಲಾಗಿದೆ. ದೆಹಲಿಗೆ ಮರಳಿ ಪ್ರಯಾಣಿಕರಿಗೆ ಹೋಟೆಲ್ ವಸತಿ ಮತ್ತು ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಇಂದು ಬೆಳಗ್ಗೆ ಪರ್ಯಯ ವ್ಯವಸ್ಥೆಯ ಮೂಲಕ ಎಲ್ಲಾ ಪ್ರಯಾಣಿಕರನ್ನು ವ್ಯಾಂಕೂವರ್ಗೆ ಕಳುಹಿಸಿಕೊಡಲಾಗಿದೆ ಎಂದು ಸಂಸ್ಥೆ ದೃಢಪಡಿಸಿದೆ.