ಬೆಂಗಳೂರು, ಮಾ. 19 (DaijiworldNews/AA): ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣದ ತನಿಖೆ ಬಹುತೇಕ ಅಂತಿಮ ಘಟ್ಟ ತಲುಪಿದ್ದು, ಮುಂದಿನ ವಾರದಲ್ಲಿ ತನಿಖಾ ತಂಡ ತನಿಖೆಯ ವರದಿ ನೀಡಲಿದೆ.

ಸಿಜೆ ರಾಯ್ ಆತ್ಮಹತ್ಯೆ ಸಂಬಂಧ ಈವರೆಗೂ ಅಧಿಕಾರಿಗಳು ನಾಲ್ಕು ಆಯಾಮಗಳಲ್ಲಿ ತನಿಖೆ ನಡೆಸಿದ್ದಾರೆ. ರಾಯ್ ಆತ್ಮಹತ್ಯೆ ಮಾಡಿಕೊಂಡ ಜಾಗದ ಹಲವು ಬಗೆಯ ಸ್ಯಾಂಪಲ್ಗಳು ಸಂಗ್ರಹಿಸಿ, ಅದನ್ನು ಎಫ್ಎಸ್ಎಲ್ಗೆ ಕಳುಹಿಸಿದ್ದರು. ಈಗ ಅದರ ರಿಪೋರ್ಟ್ ಕೂಡ ಬಂದಿದೆ. ಅದರ ಜೊತೆಗೆ ಕುಟುಂಬಸ್ಥರ ಹೇಳಿಕೆ, ಐಟಿ ಅಧಿಕಾರಿಗಳ ಹೇಳಿಕೆ, ರಾಯ್ ಆಪ್ತರ ಹೇಳಿಕೆ, ಖಾಸಗಿ ಮತ್ತು ವ್ಯಾವಹಾರಿಕ ಸಂಬಂಧ ತನಿಖೆ ನಡೆಸಿ ವರದಿ ಸಿದ್ಧಪಡಿಸಲಾಗಿದೆ.
ತನಿಖೆ ನಡೆದರೂ ಕೂಡ ಸಿಜೆ ರಾಯ್ ಆತ್ಮಹತ್ಯೆಗೆ ನಿಖರ ಕಾರಣದ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ. ಬದಲಾಗಿ, ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಲಾಗಿದೆ.