ನವದೆಹಲಿ, ಮಾ. 18 (DaijiworldNews/ AK):ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಬುಧವಾರ ನಿವೃತ್ತಿ ಹೊಂದುತ್ತಿರುವ ಸದಸ್ಯರಿಗೆ ವಿದಾಯ ಹೇಳಿದರು. ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಬಗ್ಗೆ ಖರ್ಗೆ ಅವರು ಟೀಕೆ ಪ್ರಧಾನಿ ಸೇರಿದಂತೆ ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿತು.

ಸಂಸತ್ತಿನ ಕಲಾಪಗಳ ಸಮಯದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ ದೇವೇಗೌಡರ ಹೇಳಿಕೆಗಳ ಬಗ್ಗೆ ಖರ್ಗೆ ತಮಾಷೆಯಾಗಿಯೇ ವಾಗ್ದಾಳಿ ನಡೆಸಿದರು. ಇತ್ತೀಚಿನ ದಿನಗಳಲ್ಲಿ ದೇವೇಗೌಡರು ಮತ್ತು ಅವರ ಪಕ್ಷ ಜೆಡಿಎಎಸ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವುದನ್ನು ಉಲ್ಲೇಖಿಸಿದ ಮಲ್ಲಿಕಾರ್ಜುನ ಖರ್ಗೆ ಅವರು, 'ಪ್ರೇಮ್ ಹುಮಾರೆ ಸಾಥ್, ಶಾದಿ ಮೋದಿ ಜಿ ಕೆ ಸಾಥ್' (ನಮ್ಮೊಂದಿಗೆ ಪ್ರೀತಿ ಮಾಡಿದರು, ಆದರೆ ಪ್ರಧಾನಿ ಮೋದಿ ಅವರೊಂದಿಗೆ ಮದುವೆಯಾದರು) ಎಂಬ ಹೇಳಿಕೆ ಇಡೀ ಸದನವನ್ನೇ ನಗೆಗಡಲಲ್ಲಿ ತೇಲುವಂತೆ ಮಾಡಿತು.
ನಿವೃತ್ತಿ ಹೊಂದುತ್ತಿರುವ ಸದಸ್ಯರಿಗೆ ವಿದಾಯ ಹೇಳಿದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಸದನದ ಕಾರ್ಯವಿಧಾನ ಮತ್ತು ವ್ಯವಹಾರ ನಡವಳಿಕೆಯ ನಿಯಮಗಳನ್ನು ಪರಿಶೀಲಿಸುವಂತೆ ಕರೆ ನೀಡಿದರು. ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಗಳನ್ನು ಗಂಭೀರವಾಗಿ ಚರ್ಚಿಸಲು ಸಾಧ್ಯವಾಗುವಂತೆ ಸದನವು ಹೆಚ್ಚಿನ ಅಧಿವೇಶನಗಳನ್ನು ನಡೆಸಬೇಕು ಎಂದರು.