ನವದೆಹಲಿ,ಮಾ. 11 (DaijiworldNews/AK): ದೇಶೀಯ LPG ಸಿಲಿಂಡರ್ ರೀಫಿಲ್ಲಿಂಗ್ ಕಾಯ್ದಿರಿಸಲು ಕನಿಷ್ಠ ಕಾಯುವ ಅವಧಿಯನ್ನು ಸರ್ಕಾರ 21 ದಿನಗಳಿಂದ 25 ದಿನಗಳಿಗೆ ಹೆಚ್ಚಿಸಿದೆ.

ನೀವು ಒಮ್ಮೆ ಸಿಲಿಂಡರ್ ಬುಕ್ ಮಾಡಿದರೆ 25 ದಿನಗಳು ಕಳೆಯುವವರೆಗೆ ಇನ್ನೊಂದು ಸಿಲಿಂಡರ್ ಬುಕ್ ಮಾಡುವಂತಿಲ್ಲ. ಇದೀಗ ಅಡುಗೆ ಅನಿಲ ಕೊರತೆಯ ಬಗ್ಗೆ ದೇಶಾದ್ಯಂತ ಭಯ ಆವರಿಸಿದೆ. ಆತಂಕಗೊಂಡ ಗ್ರಾಹಕರಿಂದ ಗ್ಯಾಸ್ ಏಜೆನ್ಸಿಗಳಿಗೆ ಕರೆಗಳು ಮತ್ತು ಸಿಲಿಂಡರ್ಗಳಿಗಾಗಿ ಬಹು ವಿನಂತಿಗಳು ಬರುತ್ತಿವೆ.
ಗ್ಯಾಸ್ ಬುಕ್ ಮಾಡಲು ಕರೆ ಮಾಡುತ್ತಾ ಇರುವುದರಿಂದ ಸರ್ವರ್ ಬ್ಯುಸಿ ಆಗಿದೆ. ಗ್ರಾಹಕರು ಸಾವಧಾನವಾಗಿ ನಿಮ್ಮ ಸಿಲಿಂಡರ್ ಬುಕ್ ಮಾಡಿಕೊಳ್ಳಿ. ಗೃಹಬಳಕೆ ಸಿಲಿಂಡರ್ ಬಗ್ಗೆ ಸದ್ಯಕ್ಕೆ ಆತಂಕ ಬೇಡ. ಬೇಕಾದಷ್ಟು ಸ್ಟಾಕ್ ಬರುತ್ತಿದೆ. ಆದರೆ ಕಡ್ಡಾಯವಾಗಿ ನಿಯಮಗಳನ್ನು ಪಾಲಿಸಬೇಕು ಎಂದು ಸೂಚಿಸಲಾಗಿದೆ.
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ದೇಶೀಯ ಎಲ್ಪಿಜಿ ಸಿಲಿಂಡರ್ ಬುಕಿಂಗ್ಗಳ ನಡುವೆ ಕನಿಷ್ಠ 25 ದಿನಗಳ ಅಂತರವನ್ನು ಕಡ್ಡಾಯಗೊಳಿಸಿದೆ ಎಂದು ದೃಢಪಡಿಸಿದೆ.
ಇರಾನ್ನಲ್ಲಿನ ಯುದ್ಧದಿಂದಾಗಿ ಇಂಧನ ಬಿಕ್ಕಟ್ಟಿನ ಸಾಧ್ಯತೆ ಇರುವುದರಿಂದ ದೇಶೀಯ ಬಳಕೆಗಾಗಿ ಎಲ್ಪಿಜಿ ರೀಫಿಲ್ಲಿಂಗ್ ಪಡೆಯಲು ಕಾಯುವ ಅವಧಿಯನ್ನು 21 ದಿನಗಳಿಂದ 25 ದಿನಗಳಿಗೆ ಹೆಚ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.