ಬೆಂಗಳೂರು, ಫೆ. 03 (DaijiworldNews/AK): ಚಿನ್ನದ ಬೆಲೆಯ ಸತತ ಕುಸಿತ ಮುಂದುವರಿಯುತ್ತಿದೆ. ಇಂದು ಫೆಬ್ರವರಿ 3ರಂದು ಬಂಗಾರ ಸ್ವಲ್ಪ ಮಟ್ಟಿಗೆ ಕುಸಿದಿದೆ. ಭಾರತ ಮತ್ತು ಅಮೆರಿಕದ ನಡುವೆ ವ್ಯಾಪಾರ ಒಪ್ಪಂದದ ನಂತರ ಚಿನ್ನದ ಬೆಲೆಯಲ್ಲಿ ಏರಿಳಿತವಾಗಿದೆ. ಹೀಗಾಗಿ ಚಿನ್ನದ ಬೆಲೆಯಲ್ಲಿ ಭಾರೀ ಬದಲಾವಣೆಯಾಗುವ ಸಾಧ್ಯತೆಯಿದೆ.

ಜನವರಿ 29ರಂದು ಗುರುವಾರ 22 ಕ್ಯಾರೆಟ್ ನ ಪ್ರತಿ ಗ್ರಾಂ ಚಿನ್ನ 17,885 ರೂ.ಗೆ ಏರಿತ್ತು. ಆದರೆ ನಂತರ ಸತತ ಕುಸಿಯುತ್ತಾ ಬಂದು ಇದೀಗ 15,175 ರೂ.ಗೆ ಬಂದು ನಿಂತಿದೆ.ಮಂಗಳವಾರ ಫೆಬ್ರವರಿ 03ರಂದು ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 13,910 (-130) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 11,381 (-107) ರೂ. ಬೆಲೆಗೆ ತಲುಪಿದೆ.
ಮಂಗಳವಾರ ಮಾರುಕಟ್ಟೆ ತೆರೆದ ತಕ್ಷಣ ಬೆಳ್ಳಿಯ ಬೆಲೆ ಇನ್ನಷ್ಟು ಕುಸಿತ ಕಂಡಿದೆ. ಇಂದು ಗ್ರಾಂಗೆ 20 ರೂ.ನಷ್ಟು ಕುಸಿದ ಬೆಳ್ಳಿ ಕೆಜಿಗೆ 2,80,000 ಲಕ್ಷ ರೂ. ತಲುಪಿದೆ.