ಬೆಂಗಳೂರು, ಜ. 31 (DaijiworldNews/AA): ಸತತ ಏರಿಕೆ ಕಾಣುತ್ತಿದ್ದ ಚಿನ್ನ - ಬೆಳ್ಳಿಯ ದರ ಕಳೆದ 2 ದಿನಗಳಲ್ಲಿ ಭಾರೀ ಕುಸಿತ ಕಂಡಿದೆ. ಕೇಂದ್ರ ಬಜೆಟ್ ಮಂಡನೆಗೂ ಮುನ್ನವೇ ಕಳೆದ 2 ದಿನಗಳಲ್ಲಿ ಚಿನ್ನ 10 ಗ್ರಾಮ್ಗೆ 1.5 ಲಕ್ಷ ರೂ.ಗೆ ಕುಸಿದಿದ್ದರೆ, 4 ಲಕ್ಷ ರೂ. ಇದ್ದ ಬೆಳ್ಳಿಯ ದರ 3 ಲಕ್ಷಕ್ಕೆ ಕುಸಿದಿದೆ.

ಇನ್ನು ಚಿನ್ನ - ಬೆಳ್ಳಿ ದರ ಇಳಿಕೆಯಿಂದ ವ್ಯಾಪಾರಿಗಳಿಗೆ ನೀರಾಸೆ ಉಂಟಾಗಿದೆ. ಇನ್ನು ಚಿನ್ನ - ಬೆಳ್ಳಿ ಗ್ರಾಹಕರಿಗೆ ಖುಷಿಯುಂಟಾಗಿದೆ. 1.93 ಲಕ್ಷ ರೂ.ಗೆ ತಲುಪುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದ್ದ ಚಿನ್ನದ ದರ 10 ಗ್ರಾಮ್ಗೆ ಶನಿವಾರ 1,50,849 ರೂ.ಗಳಿಗೆ ಕುಸಿದಿದೆ. ಇನ್ನು 2 ದಿನಗಳ ಹಿಂದೆ 4 ಲಕ್ಷ ರೂ. ಇದ್ದ ಕೆಜಿ ಬೆಳ್ಳಿ ಬೆಲೆ ಶನಿವಾರ 30% ಇಳಿಕೆ ಕಂಡಿದ್ದು, ಕೆಜಿ 3 ಲಕ್ಷ ರೂ.ಗಳಿಗೆ ಕುಸಿದಿದೆ.
ಶುಕ್ರವಾರ ಗ್ರಾಮ್ಗೆ 800 ರೂನಷ್ಟು ಕಡಿಮೆಗೊಂಡಿದ್ದ ಚಿನ್ನದ ಬೆಲೆ ಶನಿವಾರ 920 ರೂ. ಇಳಿಕೆಯಾಗಿದೆ. ಈ ಮೂಲಕ ಎರಡು ದಿನದಲ್ಲಿ ಒಂದೂವರೆ ಸಾವಿರ ರೂಗೂ ಅಧಿಕದಷ್ಟು ಬೆಲೆ ಕಡಿಮೆ ಆಗಿದೆ. ಇನ್ನು ಬೆಳ್ಳಿ ಒಂದೇ ದಿನ 45 ರೂಗಳಷ್ಟು ಬೆಲೆ ಇಳಿಕೆ ಆಗಿದೆ. ಎರಡು ದಿನದಲ್ಲಿ ಸುಮಾರು 60 ರೂ. ಕಡಿಮೆಯಾಗಿದೆ.