ನವದೆಹಲಿ, ಜ. 30 (DaijiworldNews/AA): ಕೆಲ ವಿಚಾರಗಳಲ್ಲಿ ನನ್ನ ಅಭಿಪ್ರಾಯಗಳನ್ನು ಬಿಜೆಪಿ ಪರವೆಂದು ತಪ್ಪಾಗಿ ಅರ್ಥೈಸಲಾಗುತ್ತಿದೆ. ಆದರೆ, ನನ್ನ ನಿಲುವು ಸರ್ಕಾರ ಅಥವಾ ಬಿಜೆಪಿ ಪಕ್ಷದ ಪರವಲ್ಲ, ದೇಶದ ಹಿತದೃಷ್ಟಿಯ ಪರವಾಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, "ಕೆಲ ವಿಚಾರಗಳಲ್ಲಿ ನನ್ನ ಅಭಿಪ್ರಾಯಗಳನ್ನು ಬಿಜೆಪಿ ಪರವೆಂದು ತಪ್ಪಾಗಿ ಅರ್ಥೈಸಲಾಗುತ್ತಿದೆ. ನಾನು ದೇಶದ ಪರ ಅಥವಾ ಸರ್ಕಾರದ ಪರ ಮಾತನಾಡಿದರೆ ಅದನ್ನು ಬಿಜೆಪಿ ಪರ ಎಂದು ಬಿಂಬಿಸುತ್ತಾರೆ. ಆದರೆ, ವಾಸ್ತವಾಗಿ ನಾನು ದೇಶದ ಪರ ಧ್ವನಿಗೂಡಿಸುತ್ತೇನೆ" ಎಂದು ಹೇಳಿದರು.
"ಕೆಲವು ಅಂತರರಾಷ್ಟ್ರೀಯ ವಿಷಯಗಳಲ್ಲಿ ರಾಜಕೀಯ ಮಾಡುವುದು ನನಗಿಷ್ಟವಿಲ್ಲ. ರಾಷ್ಟ್ರದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮಾತನಾಡಲು ಇಷ್ಟಪಡುತ್ತೇನೆ. ಇದನ್ನು ನಾನು ಯಾವಾಗಲೂ ಹೇಳುತ್ತಿರುತ್ತೇನೆ" ಎಂದರು.
ಕಾಂಗ್ರೆಸ್ ಪಕ್ಷವನ್ನ ತೊರೆಯುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, "ನಾನು ಕಾಂಗ್ರೆಸ್ನಲ್ಲಿಯೇ ಇರುತ್ತೇನೆ. ನಾನು ಎಲ್ಲಿಗೂ ಹೋಗುವುದಿಲ್ಲ. ಕೇರಳದ ಚುನಾವಣಾ ಪ್ರಚಾರದ ಭಾಗವಾಗಿರುತ್ತೇನೆ. ಯುಡಿಎಫ್ನ ಗೆಲುವಿಗಾಗಿ ಕೆಲಸ ಶ್ರಮಿಸುತ್ತೇನೆ" ಎಂದು ಸ್ಪಷ್ಟನೆ ನೀಡಿದರು.