ಮುಂಬೈ,ಜ. 28 (DaijiworldNews/AK ): ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಮೃತಪಟ್ಟ ವಿಮಾನ ದುರಂತದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ.

ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸಬಾರದು ಎಂದು ಹೇಳಿದ್ದಾರೆ. ವಿಮಾನ ದುರಂತ ಘಟನೆ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ ಏಕನಾಥ್ ಶಿಂಧೆ, ಇದು ಅತ್ಯಂತ ನೋವಿನ ಮತ್ತು ದುರದೃಷ್ಟಕರ ಘಟನೆ ಎಂದರು. ಇಂದು, ನಾನು ನನ್ನ ಅಣ್ಣನನ್ನು ಕಳೆದುಕೊಂಡಂತೆ ಭಾಸವಾಗುತ್ತಿದೆ. ಅಜಿತ್ ಪವಾರ್ ಕೇವಲ ನಾಯಕನಾಗಿರಲಿಲ್ಲ; ಅವರು ಸಮಯವನ್ನು ಗೌರವಿಸುವ ಮತ್ತು ಆಡಳಿತದ ಮೇಲೆ ಬಲವಾದ ಹಿಡಿತವನ್ನು ಹೊಂದಿದ್ದ ಜ್ಞಾನವುಳ್ಳ ವ್ಯಕ್ತಿತ್ವ ಹೊಂದಿದ್ದರು" ಎಂದು ಶಿಂಧೆ ಭಾವುಕರಾಗಿ ಹೇಳಿದರು.
ಮಹಾರಾಷ್ಟ್ರಕ್ಕೆ ಇಂದು ಕರಾಳ ದಿನ. ರಾಜ್ಯಕ್ಕೆ ಇದು ದುಃಖದ ಸುದ್ದಿ. ನಾನು ಅವರ ಜೊತೆ ಸಂಪುಟದಲ್ಲಿ ಕೆಲಸ ಮಾಡಿದ್ದೇನೆ. ಒಂದು ತಂಡವಾಗಿ ಕೆಲಸ ಮಾಡಿದ್ದೇವೆ" ಎಂದು ಅವರು ಹೇಳಿದರು.